ನಟಿ, ಮಾಜಿ ಬಿಗ್ ಬಾಸ್ ಸ್ಪರ್ಧಿ ತನಿಷಾ ಕುಪ್ಪಂಡ ‘ಕುಪ್ಪಂಡ ಜ್ಯುವೆಲರೀಸ್’ ಹೆಸರಿನ ಹೊಸ ಆಭರಣ ಮಳಿಗೆ ಪ್ರಾರಂಭ ಮಾಡಿದ್ದಾರೆ.
ಬಿಗ್ ಬಾಸ್ 10 ರ ಸ್ಪರ್ಧಿ ತನಿಷಾ ಕುಪ್ಪಂಡ ನಟಿಯಾಗಿರುವ ಜೊತೆಗೆ ಯಶಸ್ವಿ ಉದ್ಯಮಿಯೂ ಹೌದು. ಈಗಾಗಲೇ ಲಾಭದಾಯಕ ಹೋಟೆಲ್ ಬ್ಯುಸಿನೆಸ್ ಮಾಡುತ್ತಿದ್ದಾರೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ‘ಅಪ್ಪುಸ್ 93 ಕಿಚನ್’ ಹೆಸರಿನ ಹೋಟೆಲ್ ಅನ್ನು ನಡೆಸುತ್ತಿದ್ದಾರೆ ತನಿಷಾ ಕುಪ್ಪಂಡ. ಈ ಹೋಟೆಲ್ನಲ್ಲಿ ರುಚಿಕರವಾದ ವೆನ್ ಹಾಗೂ ನಾನ್ವೆಜ್ ಖಾದ್ಯಗಳನ್ನು ಸರ್ವ್ ಮಾಡುತ್ತಾರೆ.
ಇದೀಗ ತನಿಷಾ ಕುಪ್ಪಂಡ ಮತ್ತೊಂದು ಹೊಸ ಬ್ಯುಸಿನೆಸ್ ಪ್ರಾರಂಭ ಮಾಡಿದ್ದಾರೆ. ತನಿಷಾ ಕುಪ್ಪಂಡ ತಮ್ಮ ಕುಟುಂಬದ ಹೆಸರಿನಲ್ಲಿ ಆಭರಣಗಳ ಮಳಿಗೆ ಪ್ರಾರಂಭಿಸಿದ್ದಾರೆ.
ಕುಪ್ಪಂಡ ಜ್ಯುವೆಲರೀಸ್’ ಹೆಸರಿನ ಆಭರಣ ಮಳಿಗೆಯನ್ನು ತನಿಷಾ ಕುಪ್ಪಂಡ ಪ್ರಾರಂಭ ಮಾಡಿದ್ದಾರೆ. ಬೆಳ್ಳಿಯ ಆಭರಣಗಳು ಇತರೆ ಲೋಹಗಳಿಂದ ಮಾಡಿದ ಕಡಿಮೆ ಬೆಲೆಯ ಆಭರಣಗಳನ್ನು ಮಾರಾಟ ಮಾಡಲಾಗುತ್ತದೆ.
ಕುಪ್ಪಂಡ ಜ್ಯುವೆಲರೀಸ್’ 29ನೇ ತಾರೀಖು ಉದ್ಘಾಟನೆಯಾಗಿದ್ದು, ಶಾಸಕ ಪ್ರಿಯಾ ಕೃಷ್ಣ, ನಟ ಲೂಸ್ ಮಾದ ಯೋಗಿ ಹಾಗೂ ಅವರ ಪತ್ನಿ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಕುಪ್ಪಂಡ ಜ್ಯುವೆಲರೀಸ್’ಗೆ ತನಿಷಾ ಕುಪ್ಪಂಡರ ಗೆಳೆಯ ಕಾರ್ತಿಕ್ ಮಹೇಶ್ ಸಹ ಭೇಟಿ ಕೊಟ್ಟು ಗೆಳತಿಗೆ ಶುಭ ಹಾರೈಸಿದರು. ಬಿಗ್ಬಾಸ್ ಮನೆಯಲ್ಲಿದ್ದಾಗಲೇ ತನಿಷಾರ ಕನಸುಗಳನ್ನು ಕೇಳಿದ್ದೆ ಈಗ ನನಸಾಗುತ್ತಿರುವುದು ನೋಡುತ್ತಿದ್ದೇನೆ ಎಂದಿದ್ದಾರೆ.