ಮಾಲಿವುಡ್ : ಇದೀಗ ಹೊಸಬರ ತಂಡವೊಂದು ಭಾರೀ ಸದ್ದು ಮಾಡುತ್ತಿದೆ. ‘ಮಂಜುಮ್ಮೆಲ್ ಬಾಯ್ಸ್’ ಸಿನಿಮಾದ ಮೆಚ್ಚುಗೆಗೆ ಪಾತ್ರವಾಗಿದೆ. ಅದಷ್ಟೇ ಅಲ್ಲ, ಈ ಸಿನಿಮಾ ನೋಡಿ, ಚಿತ್ರತಂಡವನ್ನು ಮನೆಗೆ ಕರೆಸಿ ರಜನಿಕಾಂತ್ ಸತ್ಕರಿಸಿದ್ದಾರೆ. ತಂಡದ ಶ್ರಮಕ್ಕೆ ತಲೈವಾ ಭೇಷ್.
ಮಂಜುಮ್ಮೆಲ್ ಬಾಯ್ಸ್’ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆ ಕಾಣುತ್ತಿದೆ. ಕಮಲ್ ಹಾಸನ್ ನಂತರ ರಜನಿಕಾಂತ್ ಈ ಚಿತ್ರವನ್ನು ಮೆಚ್ಚಿದ್ದಾರೆ. ಚೆನ್ನೈನಲ್ಲಿರುವ ತಮ್ಮ ನಿವಾಸಕ್ಕೆ ಕರೆಸಿ ಚಿತ್ರತಂಡವನ್ನು ರಜನಿಕಾಂತ್ ಸತ್ಕರಿಸಿದ್ದಾರೆ. ನಟರಾದ ಗಣಪತಿ, ಚಂದು ಸಲೀಂಕುಮಾರ್, ದೀಪಕ್ ಪರಂಬೋಲ್, ನಟ ಅರುಣ್ ಜೊತೆ ನಿರ್ದೇಶಕ ಚಿದಂಬರಂ ಅವರು ರಜನಿಕಾಂತ್ ಅವರನ್ನು ಭೇಟಿಯಾಗಿ ಸಂಭ್ರಮಿಸಿದ್ದಾರೆ.
ರಜನಿಕಾಂತ್ ಅವರಿಗೆ ಯಾವುದೇ ಸಿನಿಮಾ ಅವರಿಗೆ ಇಷ್ಟವಾದಾಗ ಆ ಚಿತ್ರತಂಡವನ್ನು ಮನೆಗೆ ಕರೆಸಿ ಉಪಚರಿಸುತ್ತಾರೆ. ಚಿತ್ರತಂಡಕ್ಕೆ ಮೆಚ್ಚುಗೆ ತಿಳಿಸುತ್ತಾರೆ. ಈ ಹಿಂದೆ ಕೂಡ ‘ಕಾಂತಾರ’ ಚಿತ್ರದ ನಟ ಕಮ್ ನಿರ್ದೇಶಕ ರಿಷಬ್ ಶೆಟ್ಟಿ ಅವರನ್ನು ಸತ್ಕರಿಸಿದ್ದರು. ‘ಕಾಂತಾರ’ ಚಿತ್ರವನ್ನು ತಲೈವಾ ಹಾಡಿ ಹೊಗಳಿದ್ದರು. ಅದಷ್ಟೇ ಅಲ್ಲ, ಚಿನ್ನದ ಚೈನ್ ಅನ್ನು ಉಡುಗೊರೆಯಾಗಿ ನೀಡಿದ್ದರು.
ಮಂಸಿಕ್ಕುಮ್ಮೆಲ್ ಬಾಯ್ಸ್’ ಚಿತ್ರ ನಿರ್ದೇಶಕನಿಗೆ ಧನುಷ್‌ಗೆ ನಿರ್ದೇಶನ ಮಾಡುವ ಅವಕಾಶವಿದೆ. ಈ ಸಿನಿಮಾ ಬಗ್ಗೆ ಅಧಿಕೃತ ಮಾಹಿತಿ ಸಿಗುವವರೆಗೂ ಕಾಯಬೇಕಿದೆ.