Breaking
Tue. Dec 24th, 2024

ನಾನು ತಾತನ ರೀತಿ ನಡೆದುಕೊಂಡು ಬರುತ್ತೇನೆ’ ಎಂದು ಸುನೀಲ್ ಶೆಟ್ಟಿ..!

ನಟಿ ಆಥಿಯಾ ಶೆಟ್ಟಿ ಹಾಗೂ ಕ್ರಿಕೆಟರ್ ಕೆಎಲ್ ರಾಹುಲ್ ಅವರು ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಕಳೆದ ವರ್ಷ ಇವರಿಬ್ಬರೂ ಅದ್ದೂರಿಯಾಗಿ ಮದುವೆ ಆದರು. ಈಗ ಆಥಿಯಾ ತಂದೆ ಸುನೀಲ್ ಶೆಟ್ಟಿ ಡ್ಯಾನ್ಸ್ ರಿಯಾಲಿಟಿ ಶೋ ಒಂದರಲ್ಲಿ ಅಚ್ಚರಿಯ ವಿಚಾರ ರಿವೀಲ್ ಮಾಡಿದ್ದಾರೆ. ಅವರು ಶೀಘ್ರವೇ ಅವರು ತಾತ ಆಗುವ ಸೂಚನೆ ಕೊಟ್ಟಿದ್ದಾರೆ. ಇದರಿಂದ ಆಥಿಯಾ ಹಾಗೂ ರಾಹುಲ್ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಅವರ ಕಡೆಯಿಂದ ಅಧಿಕೃತ ಘೋಷಣೆ ಆಗಲಿ ಎಂದು ಕಾಯುತ್ತಿದ್ದಾರೆ.

ಸುನೀಲ್ ಶೆಟ್ಟಿ ಅವರು ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅವರ ಗಮನ ಸಂಪೂರ್ಣವಾಗಿ ಹೋಟೆಲ್ ಉದ್ಯಮದ ಮೇಲಿದೆ. ‘ಡ್ಯಾನ್ಸ್ ದೀವಾನೆ’ ರಿಯಾಲಿಟಿ ಶೋಗೆ ಅವರು ಜಡ್ಜ್ ಆಗಿದ್ದಾರೆ. ಇತ್ತೀಚೆಗೆ ನಡೆದ ಈ ರಿಯಾಲಿಟಿ ಶೋನ ಎಪಿಸೋಡ್ಗೆ ‘ಗ್ರ್ಯಾಂಡ್ ಮಸ್ತಿ ವಿತ್ ಗ್ರ್ಯಾಂಡ್ ಪೇರೆಂಟ್ಸ್’ ಎಂದು ಟೈಟಲ್ ಇಡಲಾಗಿತ್ತು ಈ ವೇಳೆ ಭಾರತಿ ಸಿಂಗ್ ‘ತಾತ ಆದರೆ ಹೇಗೆ ನಡೆದುಕೊಳ್ಳುತ್ತೀರಿ? ನೀವು ಯಾವಾಗಲೂ ಕೂಲ್ ಆಗಿ ಇರುತ್ತೀರಲ್ಲ’ ಎಂದು ಕೇಳಿದರು.

ಇದಕ್ಕ ಸುನೀಲ್ ಶೆಟ್ಟಿ ಉತ್ತರ ನೀಡಿದ್ದಾರೆ. ‘ಈ ರಿಯಾಲಿಟಿ ಶೋನ ಮುಂದಿನ ಸೀಸನ್ಗೆ ಬರುವಾಗ ನಾನು ತಾತನ ರೀತಿ ನಡೆದುಕೊಂಡು ಬರುತ್ತೇನೆ’ ಎಂದು ಸುನೀಲ್ ಶೆಟ್ಟಿ ಹೇಳಿದ್ದಾರೆ. ಈ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಇದಕ್ಕೆ ನಾನಾ ರೀತಿಯ ಕಮೆಂಟ್ಗಳು ಬರುತ್ತಿವೆ. 

ಕೆಎಲ್ ರಾಹುಲ್ ಹಾಗೂ ಆಥಿಯಾ ಶೆಟ್ಟಿ ಮಧ್ಯೆ ಆರಂಭದಲ್ಲಿ ಫ್ರೆಂಡ್ಶಿಪ್ ಇತ್ತು. ನಂತರ ಇಬ್ಬರೂ ಡೇಟಿಂಗ್ ಆರಂಭಿಸಿದರು. 2021ರವರೆಗೆ ಇಬ್ಬರೂ ಈ ವಿಚಾರ ರಿವೀಲ್ ಮಾಡಿದರು. ರಾಹುಲ್ ಅವರು ಆಥಿಯಾಗೆ ಬರ್ತ್ಡೇ ವಿಶ್ ತಿಳಿಸಿ ಪೋಸ್ಟ್ಗಳನ್ನು ಹಾಕಿದ್ದರು. 2023ರಲ್ಲಿ ಭಾರತೀಯ ಸಂಪ್ರದಾಯದ ಪ್ರಕಾರ ಇವರು ಮದುವೆ ಆದರು. ಸುನೀಲ್ ಶೆಟ್ಟಿ ಅವರ ಖಾಂದಾಲಾ ಎಸ್ಟೇಟ್ನಲ್ಲಿ ಈ ಮದುವೆ ನಡೆದಿತ್ತು. ರಾಹುಲ್ ಅವರು ಸದ್ಯ ಐಪಿಎಲ್ನಲ್ಲಿ ಬ್ಯುಸಿ ಇದ್ದಾರೆ. ಎಲ್ಎಸ್ಜಿ ತಂಡವನ್ನು ಅವರು ಮುನ್ನಡೆಸುತ್ತಿದ್ದಾರೆ.

Related Post

Leave a Reply

Your email address will not be published. Required fields are marked *