ಇತ್ತೀಚಿನ ದಿನಗಳಲ್ಲಿ ನಟಿಯರಿಂದಲೇ ಪ್ಲಾಸ್ಟಿಕ್ ಸರ್ಜರಿಗಳು ಹೆಚ್ಚು ಟ್ರೆಂಡ್ ಆಗುತ್ತಿದೆ. ಹೆಚ್ಚಿನ ಜನರು ತಮ್ಮ ದೇಹದ ಭಾಗಗಳಲ್ಲಿ ಸಣ್ಣ ಬದಲಾವಣೆಗಳಿಗೆ ಸಣ್ಣ ಪ್ಲಾಸ್ಟಿಕ್ ಸರ್ಜರಿಗಳನ್ನು ಮಾಡುವ ಮೂಲಕ ತಮ್ಮ ನೋಟವನ್ನು ಬದಲಾಯಿಸಲು ಪ್ರಯತ್ನಿಸುತ್ತಾರೆ. ಇನ್ನೂ ಕೆಲವರು ದೇಹದ ಸಂಪೂರ್ಣ ನೋಟವನ್ನು ಬದಲಿಸಲು ಇಡೀ ದೇಹದಲ್ಲಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುತ್ತಾರೆ. ಇದರಲ್ಲಿ ಕೆಲವೊಂದು ಸುಂದರವಾಗಿ ಕಂಡರೂ ,ಕೆಲವು ಮುಖ ಮತ್ತು ದೇಹವನ್ನು ವಿರೂಪಗೊಳಿಸಿದ ಪ್ರಕರಣಗಳೂ ಇವೆ. ಸದ್ಯ ಸುದ್ದಿಯಲ್ಲಿರುವ ಮಹಿಳೆಯೊಬ್ಬರ ವಿಚಾರದಲ್ಲೂ ಇಂಥದ್ದೇ ಘಟನೆ ನಡೆದಿದೆ.
ವಾಸ್ತವವಾಗಿ, ಒಬ್ಬ ಮಹಿಳೆ ಬಾರ್ಬಿ ಗೊಂಬೆಯಂತೆ ಸುಂದರವಾಗಿ ಕಾಣಬೇಕೆಂದು ಬಯಸಿ, ಇದಕ್ಕಾಗಿ, ಒಂದಲ್ಲ, ಎರಡಲ್ಲ ಬರೋಬ್ಬರಿ 43 ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾಳೆ. ಪರಿಣಾಮ ಅವಳ ಮುಖ ವಿಚಿತ್ರವಾಗಿ ಕಾಣತೊಡಗಿತು.ಈಕೆ ಇಲ್ಲಿಯ ವರೆಗೆ ತುಟಿ, ಮೂಗು, ಮುಖ ಮತ್ತು ಸ್ತನವನ್ನು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾಳೆ.
ಇರಾಕ್‌ನ ಬಾಗ್ದಾದ್‌ನ ದಾಲಿಯಾ ನಯೀಮ್ ಎಂಬ ಹೆಸರಿನ ಈ ಮಹಿಳೆ ನಿರೂಪಕಿ ಮತ್ತು ನಟಿಯಾಗಿ ಗುರುತಿಸಿಕೊಂಡಿದ್ದಾಳೆ. ಸೋಷಿಯಲ್ ಮೀಡಿಯಾದಲ್ಲೂ ಸಖತ್ ಫೇಮಸ್ ಆಗಿರುವ ಈ ಮಹಿಳೆ ಇನ್ಸ್ಟಾಗ್ರಾಮ್ನಲ್ಲಿ 9 ಲಕ್ಷದ 95 ಸಾವಿರ ಫಾಲೋವರ್ಸ್ಗಗಳನ್ನು ಹೊಂದಿದ್ದಾರೆ. ಆಕೆಯ ಅಭಿಮಾನಿಗಳು ಆಕೆಯನ್ನು ‘ಇರಾಕಿ ಬಾರ್ಬಿ’ ಎಂದೂ ಕರೆಯುತ್ತಾರೆ.