ಮಂಡ್ಯ : ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಚುನವಣಾ ರಾಜಕೀಯ ಚಟುವಟಿಕೆ ರಂಗೇರಿದೆ. ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಚುನಾವಣಾ ಖರ್ಚಿಗಾಗಿ ಕಾರ್ಯಕರ್ತನೊಬ್ಬ 500 ರೂ. ದುಡ್ಡು ಕೊಟ್ಟು ಗಮನ ಸೆಳೆದಿದ್ದಾನೆ.
ಕ್ಷೇತ್ರದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಪ್ರಚಾರ ನಡೆಸುತ್ತಿದ್ದಾರೆ. ಈ ವೇಳೆ ಅಭಿಮಾನಿ ಹನಕೆರೆ ಗ್ರಾಮದ ಜೋಗಪ್ಪ ಎಂಬಾತ ಚುನಾವಣಾ ಖರ್ಚಿಗೆ ಹೆಚ್ಡಿಕೆಗೆ 500 ರೂ. ಹಣ ಕೊಟ್ಟಿದ್ದಾನೆ. ಅಲ್ಲದೇ ನೆಚ್ಚಿನ ರಾಜಕಾರಣಿ ಕಾಲಿಗೆ ಬಿದ್ದು ನಮಸ್ಕರಿಸಿದ್ದಾನೆ.
ಮಂಡ್ಯದ ಖಾಸಗಿ ಹೋಟೆಲ್ಗೆ ಹೆಚ್ಡಿಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರ ಕಾಲಿಗೆ ಬಿದ್ದು ಜೋಗಪ್ಪ ಹಣ ನೀಡಿದ್ದಾನೆ. ‘ನೀವು ಕ್ಯಾಬಿನೆಟ್ ಮಿನಿಸ್ಟರ್ ಆಗಬೇಕು’ ಎಂದು ಹೆಚ್ಡಿಕೆಗೆ ಅಭಿಮಾನಿ ಆಶೀರ್ವದಿಸಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕಣವು ಗಮನ ಸೆಳೆದಿದೆ. ಮೈತ್ರಿ ಅಭ್ಯರ್ಥಿಯಾಗಿ ಹೆಚ್.ಡಿ.ಕುಮಾರಸ್ವಾಮಿ ಕಣಕ್ಕಿಳಿದಿದ್ದಾರೆ. ಇವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಟಾರ್ ಚಂದ್ರು ಸ್ಪರ್ಧಿಸಿದ್ದಾರೆ.