ಹಿರಿಯೂರು, ಏಪ್ರಿಲ್. 02 : ಲೋಕಸಭಾ ಚುನಾವಣಾ ಪ್ರಚಾರ ಕಾರ್ಯ ಆರಂಭವಾಗಿದೆ. ಚಿತ್ರದುರ್ಗ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಬಿ. ಎನ್. ಚಂದ್ರಪ್ಪ ಸ್ಪರ್ಧೆ ಮಾಡುತ್ತಿದ್ದಾರೆ. ಇಂದು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಇರುವ ಕಿಲೋ ಮೀಟರ್ ಹೇಳಿ, ಮತವನ್ನು ಯಾರಿಗೆ ಹಾಕಬೇಕೆಂಬುದನ್ನು ಜನರ ನಿರ್ಧಾರಕ್ಕೆ ಬಿಟ್ಟಿದ್ದಾರೆ.
ನನ್ನನ್ನು ಮೂಡಿಗೆರೆ ಚಂದ್ರಪ್ಪ ಎನ್ನುತ್ತಿದ್ದಾರೆ. ನಾನು ಹೊಸದುರ್ಗಕ್ಕೆ ಹೊಂದಿಕೊಂಡಿರುವ ಅಜ್ಜಂಪುರ ತಾಲ್ಲೂಕಿನವನು. ಭದ್ರಾ ಮೇಲ್ದಂಡೆ ಯೋಜನೆಯ ಕೆಳಭಾಗದ ವಸ್ತುದಲ್ಲಿ ಹುಟ್ಟಿದವನು. ಚಿತ್ರದುರ್ಗ ಕ್ಷೇತ್ರಕ್ಕೆ ಬಿಜೆಪಿ ಪಕ್ಷ ಆಕಸ್ಮಿಕ ಅಭ್ಯರ್ಥಿಯನ್ನ ಕಣಕ್ಕಿಳಿಸಿದೆ. ಬಿಜೆಪಿ ಅಭ್ಯರ್ಥಿ ರಾಜಕೀಯ ಬದುಕು ಆರಂಭಿಸಿದ್ದ ಪ್ರದೇಶದ ಭಾಷೆ ಬೇರೆ ಸ್ಥಳೀಯ ಭಾಷೆ ಬೇರೆ. ಸ್ಥಳೀಯ ಭಾಷೆ ಅವರಿಗೆ ಅರ್ಥವಾಗುವುದಿಲ್ಲ. ಅವರಿಗೆ ಸಂಸದರಾಗುವ ಅರ್ಹತೆ ಇರಬಹುದು. ಆದರೆ ಕ್ಷೇತ್ರ ವ್ಯಾಪ್ತಿಯ ಹಳ್ಳಿಗಳ ಪರಿಚಯ ಬೇಕಲ್ಲವೇ ಎಂದು ಚಂದ್ರಪ್ಪ ಪ್ರಶ್ನಿಸಿದರು.
100 ಕಿ.ಮೀ. ದೂರ ಇರುವ ಅಜ್ಜಂಪುರ ತಾಲೂಕಿನ ನಾನು ಬೇಕೋ ಅಥವಾ 500 ಕಿಲೋ ಮೀಟರ್ ದೂರದಿಂದ ಬಂದುಹೋಗಿರುವ ಬಿಜೆಪಿ ಅಭ್ಯರ್ಥಿ ಬೇಕೋ? ಮತದಾರರು ನಿರ್ಧರಿಸಲಿ ಎಂದು ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಹೇಳಿದರು.
ನಾನು ಹತ್ತು ವರ್ಷಗಳಿಂದ ನಿಮ್ಮ ಮನೆಯ ಮಗನಂತೆ ಕೆಲಸ ಮಾಡಿಕೊಂಡು ಬಂದಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆಯಿಲ್ಲ. ಭ್ರಷ್ಟಾಚಾರ, ಜಾತಿತಾರತಮ್ಯ ಆರೋಪಗಳಿಲ್ಲದೆ ಆಡಳಿತ ನಡೆಸಿಕೊಂಡು ಬಂದಿದ್ದೇನೆ.
ಏಪ್ರಿಲ್ 4 ರಂದು ನಾಮಪತ್ರ ಸಲ್ಲಿಸಿದರು, ನಮ್ಮ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ವಿರೋಧ ಪಕ್ಷಕ್ಕೆ ನಮಗೆ ತೋರಿಸಬೇಕು ಎಂದು ಚಂದ್ರಪ್ಪ ಮನವಿ ಮಾಡಿದರು.