ಮುಂಬೈ :- ಬೆಡಗಿ, ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಸಹೋದರನ ಎಂಗೇಜ್ಮೆಂಟ್ ಸಂಭ್ರಮದಲ್ಲಿದ್ದಾರೆ ಪ್ರಿಯಾಂಕಾ. ಹೊಸ ಜೋಡಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ವಿದೇಶದಲ್ಲಿ ಸೆಟಲ್ ಆಗಿರುವ ಪ್ರಿಯಾಂಕಾ ಚೋಪ್ರಾ ಕಳೆದ ಕೆಲದಿನಗಳ ಹಿಂದೆ ಮಗಳ ಜೊತೆ ಭಾರತಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಬ್ಯಾಕ್ ಟು ಬ್ಯಾಕ್ ಕಾರ್ಯಕ್ರಮಗಳಿಗೆ ನಟಿ ಹಾಜರಿ ಹಾಕುತ್ತಿದ್ದಾರೆ. ಆಭರಣ ಮಳಿಗೆ ಕಾರ್ಯಕ್ರಮ, ಅಂಬಾನಿ ಕುಟುಂಬದ ಪಾರ್ಟಿ, ಮನ್ನಾರಾ ಚೋಪ್ರಾ ಬರ್ತ್‌ಡೇ ಸೆಲೆಬ್ರೇಶನ್‌ನಲ್ಲಿ ನಟಿ ಭಾಗವಹಿಸುತ್ತಿದ್ದಾರೆ.
ಇದೀಗ ಸಹೋದರ ಸಿದ್ಧಾರ್ಥ್ ಚೋಪ್ರಾ ಎಂಗೇಜ್ಮೆಂಟ್ ಮುಂಬೈನಲ್ಲಿ ಅದ್ಧೂರಿಯಾಗಿ ನಡೆದಿದೆ. ಬಹುಕಾಲದ ಗೆಳತಿ ನೀಲಂ ಜೊತೆ ಸಿದ್ಧಾರ್ಥ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ವೇಳೆ, ಪ್ರಿಯಾಂಕಾ ರೆಡ್ ಕಲರ್ ಸೀರೆಯಲ್ಲಿ ಮಿಂಚಿದ್ದಾರೆ. ಪತಿ ನಿಕ್ ಮತ್ತು ಮಗಳ ಜೊತೆ ಮನೆ ಕಾರ್ಯಕ್ರಮದಲ್ಲಿ ನಟಿ ಕಂಗೊಳಿಸಿದ್ದಾರೆ.
ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಪ್ರಿಯಾಂಕಾ ಸಹೋದರನಿಗೆ ಬಾಲಿವುಡ್ ನಟ-ನಟಿಯರು ಶುಭಹಾರೈಸುತ್ತಿದ್ದಾರೆ.