ಬೆಳಗಾವಿ, ಏಪ್ರಿಲ್ 03: ಪೋಕ್ಸೋ ಪ್ರಕರಣದ ಆರೋಪಿಗೆ ಚಪ್ಪಲಿ ಹಾರ ಹಾಕಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ದೊಡ್ಡವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅನಿಲ್ ಮೂಕನವರ್ ಪೋಕ್ಸೋ ಪ್ರಕರಣ ಆರೋಪಿ. ಅನಿಲ್ ಮೂಕನವರ್ ಪೋಕ್ಸೋ ಪ್ರಕರಣದಲ್ಲಿ ಮೂರು ತಿಂಗಳ ಹಿಂದೆ ಜೈಲಿಗೆ ಹೋಗಿದ್ದನು. ಇದೀಗ ಮೂರು ತಿಂಗಳ ಬಳಿಕ ಜಾಮೀನಿನ ಮೇಲೆ ಹೊರಗೆ ಬಂದಿದ್ದಾನೆ. ಗ್ರಾಮಕ್ಕೆ ಬಂದ ಆರೋಪಿ ಅನಿಲ್ ಮೂಕನವರ್ಗೆ ಸಂತ್ರಸ್ತೆ ಚಪ್ಪಲಿಯಿಂದ ಹೊಡೆದಿದ್ದಾಳೆ.
ಬಳಿಕ ಸಂತ್ರಸ್ತೆ ಕುಟುಂಬಸ್ಥರು ಆರೋಪಿ ಅನಿಲ್ ಮೂಕನವರ್ ಕೈಯನ್ನು ಕೈಟ್ಟಿ ಚಪ್ಪಲಿ ಹಾರ ಹಾಕಿ ಊರಲ್ಲಿ ಮೆರವಣಿಗೆ ಮಾಡಿದ್ದಾರೆ. ಆರೋಪಿ ಅನಿಲ್ ಮೂಕನವರ್ನನ್ನು ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಿರುವ ವಿಡಿಯೋ ವೈರಲ್ ಆಗಿದೆ.