Breaking
Tue. Dec 24th, 2024

ಲತಾ ಅವರನ್ನು ಮದುವೆ ಆದ ಹೊರತಾಗಿಯೂ ನಯನತಾರಾ ಜೊತೆ ಪ್ರೀತಿಯಲ್ಲಿ ಬಿದ್ದ ಪ್ರಭುದೇವ..!

1995ರಲ್ಲಿ ಪ್ರಭುದೇವ ಅವರು ರಾಮಲತಾ ಅವರನ್ನು ಮದುವೆ ಆದರು. ಅವರ ಮಗ ಕ್ಯಾನ್ಸರ್ ನಿಂದ ನಿಧನ ಹೊಂದಿದರು. ಇದು ಪ್ರಭುದೇವ ಅವರಿಗೆ ಭಾವನಾತ್ಮಕವಾಗಿ ಸಾಕಷ್ಟು ಕಾಡಿತ್ತು. ಲತಾ ಅವರನ್ನು ಮದುವೆ ಆದರು ನಯನತಾರಾ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು ಪ್ರಭುದೇವ. 

ಚಿತ್ರರಂಗದಲ್ಲಿ ಮದುವೆ, ವಿಚ್ಛೇದನ ಸಖತ್ ಕಾಮನ್. ಪತ್ನಿಯ ಜೊತೆ ಹಾಯಾಗಿ ಸಂಸಾರ ನಡೆಸುತ್ತಿರುವಾಗಲೇ ಲವ್ ಅಫೇರ್ ಇಟ್ಟುಕೊಂಡಿರುವ ಅನೇಕ ಸೆಲೆಬ್ರಿಟಿಗಳು ಇದ್ದಾರೆ. ಈ ಸಾಲಿನಲ್ಲಿ ಭಾರತದ ಮೈಕಲ್ ಜಾಕ್ಸನ್ ಎಂದು ಫೇಮಸ್ ಆಗಿರೋ ಪ್ರಭುದೇವ ಕೂಡ ಇದ್ದಾರೆ. ಪ್ರಭುದೇವ ಡ್ಯಾನ್ಸಿಂಗ್ ಸ್ಕಿಲ್ ನೋಡಿ ಫಿದಾ ಆದವರ ಸಂಖ್ಯೆ ದೊಡ್ಡದಿದೆ. 90 ರ ಪ್ರಸ್ತುತದಲ್ಲಿ ಅವರೆಲ್ಲರೂ ಮೈಕಲ್ ಜಾಕ್ಸನ್‌ಗೆ ಹೋಲಿಕೆ ಮಾಡುತ್ತಿದ್ದರು. ಅವರ ಲವ್ ವಿಚಾರ ಅನೇಕರಿಗೆ ಶಾಕಿಂಗ್ ಎನಿಸಿದೆ. 

ಪ್ರಭುದೇವ ಅವರಿಗೆ ಇಂದು (ಏಪ್ರಿಲ್ 3) ಬರ್ತ್ಡೇ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಪ್ರಭುದೇವ ಅವರು ಸಾಕಷ್ಟು ಹಾಡುಗಳಿಗೆ ಡ್ಯಾನ್ಸ್ ಕೋರಿಯೋಗ್ರಫಿ ಮಾಡಿದ್ದಾರೆ. ಅವರು ‘ರೌಡಿ ರಾಥೋಡ್’ ಸೇರಿ ಅನೇಕ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಅವರು ಕನ್ನಡದ ‘ಕರಟಕ ಧಮನಕ’ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಅವರಿಗೆ ಶಿವರಾಜ್ ಕುಮಾರ್ ಜೊತೆಗೆ ಆಗಿದ್ದರು. ಪ್ರಭುದೇವ ಅವರು 2008ರಲ್ಲಿ ಲವ್ ಅಫೇರ್ ವಿಚಾರಕ್ಕೆ ಸುದ್ದಿ ಆಗಿದ್ದರು.

1995ರಲ್ಲಿ ಪ್ರಭುದೇವ ಅವರು ರಾಮಲತಾ ಅವರನ್ನು ಮದುವೆ ಆದರು. ಈ ದಂಪತಿಗೆ ಮಗ ಇದ್ದ. ಅವನಿಗೆ 13 ವರ್ಷ. ಆಗಲೇ ಅವನು ಕ್ಯಾನ್ಸರ್ ನಿಂದ ನಿಧನ ಹೊಂದಿದ. ಇದು ಪ್ರಭುದೇವ ಅವರಿಗೆ ಭಾವನಾತ್ಮಕವಾಗಿ ಸಾಕಷ್ಟು ಕಾಡಿತ್ತು. ಲತಾ ಅವರನ್ನು ಮದುವೆ ಆದರು ನಯನತಾರಾ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು ಪ್ರಭುದೇವ. ಇದನ್ನು ರಾಮಲತಾ ಅವರು ಸಹಿಸಲಿಲ್ಲ. 

ಪ್ರಭುದೇವ ಹಾಗೂ ನಯನತಾರಾ ಪ್ರೀತಿ ವಿಚಾರ ಮದುವೆ ಹಂತಕ್ಕೆ ಹೋಗಿತ್ತು. ಆದರೆ, ಇದಕ್ಕೆ ರಾಮಲತಾ ಅವಕಾಶ ನೀಡಲೇ ಇಲ್ಲ. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತು. ರಾಮಲತಾ ಹಾಗೂ ಪ್ರಭುದೇವ ಮತ್ತೆ ಒಂದಾಗುವಂತೆ ಜಡ್ಜ್ ಸೂಚಿಸಿದರು. ನಯನತಾರಾ ಅವರಿಂದ ದೂರವೇ ಇರಲು ಪ್ರಭುದೇವ ಅವರಿಗೆ ಸೂಚನೆ ನೀಡಲಾಯಿತು. ಹೀಗಿರುವಾಗಲೇ ನಯನತಾರಾ ಹಾಗೂ ಪ್ರಭುದೇವ ಮುದುವೆ ಆದರೆ ತಾವು ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಬೆದರಿಕೆ ಹಾಕಿದರು ರಾಮಲತಾ.

ಪ್ರಭುದೇವ ಅವರಿಂದ ನಯನತಾರಾ ದೂರ ಆದರು. ಇದೇ ವೇಳೆ ಪ್ರಭುದೇವ ಹಾಗೂ ರಾಮಲತಾ ವಿಚ್ಛೇದನ ಪಡೆದರು. ಇದರಿಂದ ಅವರು ಸಾಕಷ್ಟು ತೊಂದರೆ ಅನುಭವಿಸಿದರು. ಸದ್ಯ ಹಲವು ಸಿನಿಮಾ ಕೆಲಸಗಳಲ್ಲಿ ಬ್ಯೂಸಿ ಇದ್ದಾರೆ.   

ಪ್ರಭುದೇವ ಅವರು 2020ರಲ್ಲಿ ಹಿಮಾನಿ ಸಿಂಗ್ ಅವರ ಮದುವೆ ಆಗಿ ಎಲ್ಲರೂ ಎಚ್ಚರಗೊಂಡರು. ಈ ಮದುವೆ ಗುಟ್ಟಾಗಿ ನಡೆದಿತ್ತು. ಹಿಮಾನಿ ಅವರು ವೈದ್ಯೆ ಆಗಿದ್ದಾರೆ. ಅವರಿಗೆ ಇತ್ತೀಚೆಗೆ ಮಗು ಜನಿಸಿದೆ. ಪ್ರಭುದೇವ ಅವರು ದಳಪತಿ ವಿಜಯ್ ನಟನೆಯ ‘GOAT’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

 

 

Related Post

Leave a Reply

Your email address will not be published. Required fields are marked *