ಬಳ್ಳಾರಿ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗಾಲಿ ಜನಾರ್ದನ ರೆಡ್ಡಿ ಅವರು ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕಡೆ ಗಳಿಗೆಯ ತನಕ ಟಿಕೆಟ್ ಗಾಗಿ ಕಾದರು. ಆದರೆ ಟಿಕೆಟ್ ಸಿಗದ ಕಾರಣ ತಮ್ಮದೇ ಆದ ಕೆ ಆರ್ ಪಿ ಪಿ ಪಕ್ಷವನ್ನು ಕಟ್ಟಿದರು.
ಆ ಪಕ್ಷದಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಜನಾರ್ದನ ರೆಡ್ಡಿ ಕೂಡ ಸ್ಪರ್ಧಿಸಿ ಗೆದ್ದರ. ಹೀಗಾಗಿ ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಪಕ್ಷಕ್ಕೆ ಆಹ್ವಾನ ಬಂದಿದೆ. ಇದೀಗ ಲೋಕಸಭಾ ಚುನಾವಣೆಯಿಂದ ಬಿಜೆಪಿ ಜೊತೆಗೆ ಕೆ ಆರ್ ಪಿ ಪಿ ವಿಲೀನವಾಗಿದೆ.
ಇದರ ಬೆನ್ನಲ್ಲೇ ಇಂದು ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ ಬಿಜೆಪಿ ಕಚೇರಿಗೆ ಬಂದಿದ್ದಾರೆ. ಕಳೆದ ಹದಿಮೂರು ವರ್ಷಗಳ ಬಳಿಕ ಬಳ್ಳಾರಿಯ ಬಿಜೆಪಿ ಕಚೇರಿಗೆ ಕಾಲಿಟ್ಟಿದ್ದಾರೆ. ರೇಂಜ್ ರೋವರ್ ಕಾರಿನಲ್ಲಿ ಬಂದು ಎಲ್ಲರ ಗಮನ ಸೆಳೆದಿದ್ದಾರೆ. ಅದರ ಜೊತೆಗೆ 101 ಕಾರಿನಲ್ಲಿ ಲಕ್ಷ್ಮೀ ಅರುಣಾ ಅವರ ಬೆಂಬಲಿಗರು ಬಂದಿದ್ದಾರೆ.
ಲಕ್ಷ್ಮೀ ಅರುಣಾ ಅವರಿಗೆ ಬಿಜೆಪಿಯ ಮಹಿಳಾ ಯುವ ಮೋರ್ಚಾ ಘಟಕದಿಂದ ಆರತಿ ಬೆಳಗುವ ಮೂಲಕ ಭರ್ಜರಿ ಸ್ವಾಗತ ಸಿಕ್ಕಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಜನಾರ್ದನ ರೆಡ್ಡಿಗೆ ಹಿಡಿತವಿದೆ.
ಹೀಗಾಗಿ ಈ ಜನಾರ್ದನ ರೆಡ್ಡಿ ಸೇರ್ಪಡೆಯಿಂದಾಗಿ ಬಿಜೆಪಿಗೆ ಸುತ್ತ ಮುತ್ತ ಗೆಲುವು ಸುಲಭವಾಗಲಿದೆ. ಹೀಗಾಗಿ ಜನಾರ್ದನ ರೆಡ್ಡಿ ಅವರನ್ನು ಬಿಜೆಪಿಗೆ ಬರಮಾಡಿಕೊಂಡಿದ್ದಾರೆ. ಇವತ್ತಿನ ಕಾರ್ಯಕ್ರಮಕ್ಕೆ ಇಂದು ಲಕ್ಷ್ಮೀ ಅರುಣಾ ಅವರು ಬಿಜೆಪಿ ಕಚೇರಿಗೆ ಹೋಗಿ ಬಂದಿದ್ದಾರೆ.