ಚಿತ್ರದುರ್ಗ . ಏ.05: ನಗರದ ಕೆ.ಬಿ.ಬಡಾವಣೆಯ ಕಿಂಟೋ ಕಾನ್ವೆಂಟ್ ಕಿರಿಯ ಪ್ರಾಥಮಿಕ ಶಾಲೆ, ಕೋಟೆ ರಸ್ತೆಯ ಮಿನರ್ವ ಕಾನ್ವೆಂಟ್ ಪ್ರಾಥಮಿಕ ಶಾಲೆ, ಜೈನ್ ಕಾಲೋನಿಯ ಮಾಡಲ್ ಸೈನಿಕ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಮಾಳಪ್ಪನಹಟ್ಟಿಯ ಗುಡ್ ಷಫರ್ಡ್ ಶಾಲೆಗಳು ಮಾನ್ಯತೆ ಪಡೆಯದೇ ಅನಧಿಕೃತವಾಗಿ ಶಾಲೆ ಸ್ಥಳಾಂತರಿಸಿ ನಡೆಸುತ್ತಿವೆ. ಈ ಶಾಲೆಗಳಿಗೆ ಪ್ರಸಕ್ತ 2024-25 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಹಾಗೂ ಮುಂದಿನ ಶೈಕ್ಷಣಿಕ ಸಾಲಿಗೆ ತಮ್ಮ ಮಕ್ಕಳನ್ನು ದಾಖಲಿಸಬಾರದು.
ಯಾವುದೇ ಖಾಸಗಿ ಶಾಲೆಗೆ ದಾಖಲಾಗುವ ಮುನ್ನ ಶಾಲೆ ಮಾನ್ಯತೆ, ಮಂಜೂರಾತಿ ಪಡೆದ ಸ್ಥಳದಲ್ಲಿ ನಡೆಯುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಅನಧಿಕೃತ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಿದರೆ ಪೋಷಕರೇ ಹೊಣೆಗಾರರು ಎಂದು ಶಾಲಾ ಇಲಾಖೆ ಚಿತ್ರದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಎಚ್ಚರಿಸಿದ್ದಾರೆ.