ಭದ್ರಾವತಿ : ಈಜಲು ಹೋದ ಯುವಕನೋರ್ವ ನೀರಲ್ಲಿ ಮುಳುಗಿ ಸಾವಿಗೀಡಾದ ಘಟನೆ ಶ್ರೀ ಕ್ಷೇತ್ರ ಕೂಡಲಿ ಗ್ರಾಮದ ತುಂಗಭದ್ರಾ ಸಂಗಮದಲ್ಲಿ ನಡೆದಿದೆ.
ಶಿವಮೊಗ್ಗ ಅಣ್ಣಾನಗರದ ಸಮಿವುಲ್ಲಾ ಹಾಗೂ ತಸ್ಮಿಯಾ ಬಾನು ಇವರ ಪುತ್ರ ಮುಬಾರಕ್ (18) ಮೃತ ಯುವಕ.
ಈತ ಹೊಳೆಹೊನ್ನೂರು ಪಟ್ಟಣದ ಐಟಿಐ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಪ್ರತಿನಿತ್ಯ ಪಟ್ಟಣದ ಕಾಲೇಜಿನ ವ್ಯಾಸಂಗಕ್ಕೆ ಬರುತ್ತಿದ್ದ ಈ ಘಟನೆ ಎಂದಿನಂತೆ ಕಾಲೇಜಿಗೆ ಹೋಗಿ ಬರುವುದಾಗಿ ಮನೆಯಲ್ಲಿ ತಿಳಿಸಿ ಕೂಡಲಿ ಸಂಗಮದಲ್ಲಿ ಸ್ನಾನ ಮಾಡಲು ಶಿವಮೊಗ್ಗ ತೆರಳಿದಾಗ ಈ ಘಟನೆ ನಡೆದಿದೆ. ಈ ಸಂಬಂಧ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.