ಚಿತ್ರದುರ್ಗ. ಏ.05: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಲ್ಲಿಕೆಯಾಗಿದ್ದ 28 ಅಭ್ಯರ್ಥಿಗಳ ನಾಮಪತ್ರಗಳ ಪೈಕಿ ನಾಲ್ವರ ನಾಮಪತ್ರಗಳು ತಿರಸ್ಕಂತಗೊಂಡಿದ್ದು, 24 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿನ ಚುನಾವಣಾಧಿಕಾರಿಗಳ ಕಾರ್ಯಾಲಯದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ಶುಕ್ರವಾರ 28 ಅಭ್ಯರ್ಥಿಗಳಿಂದ ಸಲ್ಲಿಕೆಯಾಗಿದ್ದ 36 ನಾಮಪತ್ರಗಳ ಪರಿಶೀಲನೆ ನಡೆಸಿದರು.
ಕ್ರಮಬದ್ಧವಾಗಿರುವ ನಾಮಪತ್ರಗಳ ವಿವರ : ಬಹುಜನ ಸಮಾಜ ಪಾರ್ಟಿಯ ಅಶೋಕ ಚಕ್ರವರ್ತಿ, ಭಾರತೀಯ ಜನತಾ ಪಾರ್ಟಿಯ ಗೋವಿಂದ ಮಕ್ತಪ್ಪ ಕಾರಜೋಳ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಬಿ.ಎನ್.ಚಂದ್ರಪ್ಪ,ಕರ್ನಾಟಕ ರಾಷ್ಟ್ರಸಮಿತಿ ಪಕ್ಷದ ನರಸಿಂಹರಾಜು ಸಿ.ಎನ್,ಉತ್ತಮ ಪ್ರಜಾಕೀಯ ಪಾರ್ಟಿಯ ರಮೇಶ್ ನಾಯ್ಕ್ ಟಿ, ಇಂಡಿಯನ್ ಮೂವ್‍ಮೆಂಟ್ ಪಾರ್ಟಿಯ ಬಿ.ಟಿ.ರಾಮಸುಬ್ಬಯ್ಯ, ಕರುನಾಡ ಸೇವಕರ ಪಕ್ಷದ ಶಬರೀಶ್ ಆರ್, ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಸುಜಾತ.ಡಿ, ಪಕ್ಷೇತರ ಅಭ್ಯರ್ಥಿಗಳಾದ ಅಮೃತ ರಾಜ, ಕೃಷ್ಣಮೂರ್ತಿ,ಗಣೇಶ್,ತುಳಸಿ ಹೆಚ್, ಎಂ.ಪಿ.ದಾರಕೇಶ್ವರಯ್ಯ, ಆರ್.ದಾಸಪ್ಪ,ದೇವರಾಜ ಟಿ, ಕೆ.ನರಸಿಂಹಮೂರ್ತಿ,ನಾಗರಾಜಪ್ಪ, ಭೂತರಾಜ ವಿ.ಎಸ್,ಮಂಜುನಾಥ ಸ್ವಾಮಿ ಟಿ,ರಘುಕುಮಾರ್ ಎಸ್, ಬಿ.ವೆಂಕಟೇಶ್, ಕೆ.ಶಿವಲಿಂಗಪ್ಪ, ಶ್ರೀನಿವಾಸ ಎಸ್.ಹೆಚ್, ಸುಧಾಕರ. ಆರ್ ಅವರ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.