Breaking
Tue. Dec 24th, 2024

ಅಜ್ಮೀರ್ನಲ್ಲಿ ರೋಡ್ ಶೋ ಮಾಡಿ ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಶ್ರೀರಾಮನನ್ನು ದ್ವೇಷಿಸುತ್ತದೆ ಎಂದು ನರೇಂದ್ರ ಮೋದಿ ಕಿಡಿ..!

ಅಜ್ಮೀರ್, ಏಪ್ರಿಲ್ 06 : ಅಯೋಧ್ಯೆ ರಾಮಮಂದಿರದ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಬರದಂತೆ ಕಾಂಗ್ರೆಸ್ ತನ್ನ ನಾಯಕರಿಗೆ ವಿರೋಧ ವ್ಯಕ್ತಪಡಿಸಿತ್ತು. ಪ್ರಾಣ ಪ್ರತಿಷ್ಠಾಪನೆಗೆ ಆಗಮಿಸಿದ್ದ ಕೆಲ ನಾಯಕರನ್ನು ಪಕ್ಷದಿಂದ ಆರು ವರ್ಷ ಉಚ್ಛಾಟನೆ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಲೋಕಸಭೆಯ ಚುನಾವಣಾ ಪ್ರಚಾರದ ಅಂಗವಾಗಿ ಶನಿವಾರ ಅಜ್ಮೀರ್ನಲ್ಲಿ ರೋಡ್ ಶೋ ಮಾಡಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಶ್ರೀರಾಮನನ್ನು ದ್ವೇಷಿಸುತ್ತಾರೆ ಎಂದು ಕಿಡಿಕಾರಿದ್ದಾರೆ. 

ರಾಮ ಮಂದಿರ ನಿರ್ಮಾಣದಿಂದ ಎಲ್ಲರಿಗೂ ಸಂತೋಷವಾಗಿದೆ, ಇಲ್ಲವೇ ನೀವೇ ಹೇಳಿ. ಆದರೆ ಕಾಂಗ್ರೆಸ್ ಮಾತ್ರ ರಾಮನನ್ನು ಎಷ್ಟು ದ್ವೇಷಿಸುತ್ತದೆ ಎಂದರೆ ಅವರು ಪ್ರಾಣಪ್ರತಿಷ್ಠೆಗೆ ಬರುವವರನ್ನು ವಿರೋಧಿಸುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿದ್ದಾರೆ. 

ಶ್ರೀರಾಮನಿಲ್ಲದ ಈ ದೇಶವನ್ನು ನೀವು ನೋಡಲುಬಲ್ಲಿರಾ ? ನಮ್ಮ ದಿನನಿತ್ಯ ಪ್ರಾರಂಭವಾಗುವುದೇ ರಾಮನಿಂದ. ಕೊನೆಗೊಳ್ಳುವುದು ಕೂಡ ರಾಮನಿಂದ. ಆದರೆ ನಿಮಗೆ (ಕಾಂಗ್ರೆಸ್) ಯಾಕೆ ಆ ರಾಮನ ಮೇಲೆ ಅಷ್ಟು ಕೋಪ? ಇದು ನನಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ.

ನಮ್ಮ ಮನೆಯಲ್ಲಿ ರಾಮನಿದ್ದಾನೆ. ಇನ್ನೇನು ಕೆಲ ದಿನಗಳಲ್ಲಿ ರಾಮನವಮಿ ಬರುತ್ತದೆ. ಪ್ರತಿಯೊಬ್ಬರು ಅದ್ಧೂರಿಯಾಗಿ ರಾಮನವಮಿ ಆಚರಿಸುತ್ತಾರೆ. ನೀವು ಎಷ್ಟು ಪ್ರತಿಭಟಿಸುತ್ತೀರಿ ಎಂದು ವಾಗ್ದಾಳಿ ಮಾಡಿದ್ದೀರಿ. 

ಈ ರಾಮ ಮಂದಿರ ನಿರ್ಮಾಣದಿಂದಾಗಿ ಇಡೀ ಅಭಿವೃದ್ಧಿ ಹಿನ್ನಡೆಯಾಗಿದೆ ಎಂದು ಕಾಂಗ್ರೆಸ್ ಆರೋಪವಾಗಿ ಅವರು ಮಾತನಾಡಿದರು, ಬಡವರು, ಹಿಂದುಳಿದವರು ಮತ್ತು ಯುವಕರ ಕಲ್ಯಾಣದ ಬಗ್ಗೆ ಕಾಂಗ್ರೆಸ್ ಎಂದಿಗೂ ಯೋಚಿಸಲಿಲ್ಲ. 100 ವರ್ಷಗಳ ಭಾರತವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಪ್ರಧಾನಿ ಹುದ್ದೆಯು ನಾಗರಿಕರು ನೀಡಿದ ಉತ್ತಮ ಅವಕಾಶವಾಗಿದೆ ಎಂದು ಹೇಳಿದ್ದಾರೆ.

Related Post

Leave a Reply

Your email address will not be published. Required fields are marked *