ಕೋಲಾರ : ಜನ ನಾಲ್ಕು ದಿಕ್ಕುಗಳಿಂದ ಹರಿದುಬಂದರು ಅಂತ ಹೇಳುತ್ತಾರಲ್ಲ, ಹಾಗಿದೆ ಈ ವಿಹಂಗಮ ದೃಶ್ಯ. ರಾಜ್ಯ ಕಾಂಗ್ರೆಸ್ ನಾಯಕರು ಇಂದು ಕುರುಡುಮಲೆ ವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಲೋಕಸಭಾ ಚುನಾವಣೆಗೆ ಪ್ರಚಾರ ಕಾರ್ಯವನ್ನು ಮುಳಬಾಗಿಲುನಿಂದ ಆರಂಭಿಸಿದರು.
ಕೋಲಾರ ಜಿಲ್ಲೆಯ ಮುಳುಬಾಗಿಲು ದೊಡ್ಡ ಊರೇನಲ್ಲ, ಸುಮಾರು 65,000 ಜನಸಂಖ್ಯೆಯಿರುವ ತಾಲ್ಲೂಕು ಕೇಂದ್ರ. ಅದರೆ ಜನಸಾಗರ ನೋಡುತ್ತಿದ್ದರೆ ಇಡೀ ಊರಿನ ಜನ ಇಲ್ಲಿ ನೆರೆದಿದ್ದಾರೇನೋ ಅಂತ ಭಾಸವಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೋಲಾರದ ಕಾಂಗ್ರೆಸ್ ಅಭ್ಯರ್ಥಿ ಕೆವಿ ಗೌತಮ್ ಗೋಸ್ಕರ ಇಲ್ಲಿಂದಲೇ ಪ್ರಚಾರ ಕಾರ್ಯ ಆರಂಭಿಸಿದರು. ತೆರೆದ ವಾಹನದಲ್ಲಿ ಅವರಿಬ್ಬರ ಜೊತೆ ಗೌತಮ್, ಸಚಿವ ಎಂಸಿ ಸುಧಾಕರ್, ನಜೀರ್ ಅಹ್ಮದ್ ಮತ್ತು ಇನ್ನೂ ಕೆಲ ನಾಯಕರನ್ನು ನೋಡಬಹುದು. ತಮ್ಮ ಅಳಿಯನಿಗೆ ಟಿಕೆಟ್ ಸಿಗದ ಕಾರಣ ಮುನಿಸಿಕೊಂಡಿರುವ ಸಚಿವ ಕೆಹೆಚ್ ಮುನಿಯಪ್ಪ ಅವರ ಗೈರುಹಾಜರಿ ಎದ್ದು ಕಾಣುತಿತ್ತು. ಇವತ್ತಿನ ರ‍್ಯಾಲಿ ಕಾಂಗ್ರೆಸ್ ಶಿಬಿರದಲ್ಲಿ ಹರ್ಷ ಮೂಡಿಸಿರಬಹುದು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೋಲಾರದ ಕಾಂಗ್ರೆಸ್ ಅಭ್ಯರ್ಥಿ ಕೆವಿ ಗೌತಮ್ ಗೋಸ್ಕರ ಇಲ್ಲಿಂದಲೇ ಪ್ರಚಾರ ಕಾರ್ಯ ಆರಂಭಿಸಿದರು. ತೆರೆದ ವಾಹನದಲ್ಲಿ ಅವರಿಬ್ಬರ ಜೊತೆ ಗೌತಮ್, ಸಚಿವ ಎಂಸಿ ಸುಧಾಕರ್, ನಜೀರ್ ಅಹ್ಮದ್ ಮತ್ತು ಇನ್ನೂ ಕೆಲ ನಾಯಕರನ್ನು ನೋಡಬಹುದು.