ಸಾಕಷ್ಟು ಜನರಿಗೆ ಲಿಫ್ಟ್ ಒಳಗೆ ಮಿರರ್ನಲ್ಲಿ ಅಥವಾ ಸುಮ್ಮನೆ ಸೆಲ್ಫಿ ತೆಗೆಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಇದೀಗ ಇಲ್ಲೊಂದು ವಿಡಿಯೋ ವೈರಲ್ ಆಗಿದ್ದು, ಯುವತಿಯೊಬ್ಬಳು ಸೆಲ್ಫಿ ಕ್ಲಿಕ್ಕಿಸಲು ಹೋಗಿ ತನ್ನ ಮೊಬೈಲ್ ಫೋನನ್ನೇ ಕಳೆದುಕೊಂಡಿದ್ದಾಳೆ. @crazyclipsonly ಎಂಬ ಟ್ವಿಟರ್ ಖಾತೆಯಲ್ಲಿ ಏಪ್ರಿಲ್ 05ರಂದು ಹಂಚಿಕೊಂಡ ವಿಡಿಯೋ ಒಂದೇ ದಿನದಲ್ಲಿ 12.7ಮಿಲಿಯನ್ ವೀಕ್ಷಣೆಯನ್ನು ಪಡೆದುಕೊಂಡಿದೆ.
ವಿಡಿಯೋದಲ್ಲಿ ಯುವತಿ ಸೆಲ್ಫಿ ತೆಗೆದು ಲಿಫ್ಟ್ನಿಂದ ಹೊರ ಬರುವ ವೇಳೆ ಲಿಫ್ಟ್ನ ಒಳಗೆ ಬಿದ್ದಿದೆ. ಮೊಬೈಲ್ ಎಲ್ಲಿ ಬಿದ್ದಿದೆ ಎಂದು ನೋಡಲು ಲಿಫ್ಟ್ ಕೆಳಗೆ ನೋಡಲು ಪ್ರಯತ್ನಿಸಿದ್ದು, ಆದರೆ ಯಾವುದೇ ಪ್ರಯೋಜನವಾಗದೇ ಅಳುತ್ತಿರುವುದನ್ನು ಕಾಣಬಹುದು.
ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು ಪ್ರತಿಕ್ರಿಯಿಸಿದ್ದು “ನಿಮ್ಮ ಫೋನ್ ಈ ರೀತಿ ಕೆಳಗೆ ಬೀಳುವಂಥ ತಪ್ಪನ್ನು ಎಂದಿಗೂ ಮಾಡಬೇಡಿ, ಬದಲಿಗೆ ನಿಮ್ಮ ಫೋನ್ ಅನ್ನು ನಿಮ್ಮ ಜೇಬಿನಲ್ಲಿ ಇರಿಸಿ” ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.