Breaking
Tue. Dec 24th, 2024

ಮೋದಿ ಮೋದಿ ಎಂಬ ಭ್ರಮಲೋಕದಲ್ಲಿ ತೇಲುತ್ತಿರುವ ಮಕ್ಕಳಿಗೆ ಅವರ ತಂದೆ ತಾಯಿಗಳು ಅರಿವು ಮೂಡಿಸುವ ಕೆಲಸ ಮಾಡಬೇಕು ಎಂ.ರಮೇಶ್ ಶೆಟ್ಟಿ ಶಂಕರಘಟ್ಟ..!

ತೀರ್ಥಹಳ್ಳಿ : ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಮಾಡಿರುವ ಸಹಾಯದಿಂದ ನಮ್ಮ ಬದುಕು ಹಸನಾಗಿದೆ ಮತ್ತು ತೃಪ್ತಿಯಿಂದ ಬದುಕುತ್ತಿದ್ದೇವೆ ಎಂದು ಮೋದಿ ಮೋದಿ ಎಂಬ ಭ್ರಮಲೋಕದಲ್ಲಿ ತೇಲುತ್ತಿರುವ ಮಕ್ಕಳಿಗೆ ಅವರ ತಂದೆ ತಾಯಿಗಳು ಅರಿವು ಮೂಡಿಸುವ ಕೆಲಸ ಮಾಡಬೇಕೆಂದು ತೀರ್ಥಹಳ್ಳಿ ಕ್ಷೇತ್ರದ ಚುನಾವಣೆ ಉಸ್ತುವಾರಿ ಎಂ.ರಮೇಶ್ ಶೆಟ್ಟಿ ಶಂಕರಘಟ್ಟ ಇವರು ಅಭಿಪ್ರಾಯಪಟ್ಟರು. 

ಅವರು ಶನಿವಾರ ತೀರ್ಥಹಳ್ಳಿ ತಾಲ್ಲೂಕಿನ ಗಾಜನೂರು, ಸಿಂಗನಬಿದ್ರೆ, ಮಂಡಗದ್ದೆ, ತೂದೂರು, ಬೆಜ್ಜುವಳ್ಳಿ, ಕನ್ನಂಗಿ ಹಾಗೂ ಹಣಿಗೆರೆಕಟ್ಟೆಯಲ್ಲಿ ಆಯೋಜಿಸಿದ್ದ ಚುನಾವಣೆಯ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದರು.

35 ವರ್ಷಗಳ ಹಿಂದೆ ಬಂಗಾರಪ್ಪ ನವರು ಹತ್ತು ಹೆಚ್ ಪಿ ಪಂಪ್ ಸೆಟ್ ಗಳಿಗೆ ಉಚಿತವಾದ ವಿದ್ಯುತ್ ನೀಡದೇ ಹೋಗಿದ್ದಲ್ಲಿ ಸಣ್ಣ ಸಣ್ಣ ರೈತರು ತೋಟ-ಗದ್ದೆಗಳನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ನಮ್ಮ ರೈತರು ಇಂದು ತೋಟಗಳಿಗೆ ಬಳಸುತ್ತಿರುವ ವಿದ್ಯುತ್ ಬಿಲ್ ಕಟ್ಟಬೇಕಿದ್ದರೆ ತಿಂಗಳಿಗೆ 4-5 ಸಾವಿರ ರೂಪಾಯಿ ಗಳನ್ನು ಪಾವತಿಸಬೇಕಿತ್ತು. ಇಂದು ಲಕ್ಷಾಂತರ ಕುಟುಂಬಗಳು ನೆಮ್ಮದಿ ಯಿಂದ ಬದುಕು ಕಟ್ಟಿಕೊಂಡಿದ್ದಾ ರೆಂದರೆ ಅದಕ್ಕೆ ಕಾರಣ ಬಂಗಾರಪ್ಪ ನವರು.

ಗ್ರಾಮೀಣ ಭಾಗದ ಮಕ್ಕಳು ಇಂದು ದೊಡ್ಡ, ಡೊಡ್ಡ ಸರ್ಕಾರಿ ಹುದ್ದೆಯಲ್ಲಿದ್ದಾರೆಂದರೆ ಗ್ರಾಮೀಣ ಕೃಪಾಂಕದ ಕೃಪೆ. ಬಂಗಾರಪ್ಪ ಎಲ್ಲಾ ಕಾರ್ಯಕ್ರಮಗಳು ನಮಗೆ ಗೊತ್ತಿದೆ. ಆದರೆ ಮಕ್ಕಳಿಗೆ ಇದರ ಬಗ್ಗೆ ಅರಿವಿಲ್ಲ. ಇದನ್ನು ಮಕ್ಕಳಲ್ಲಿ ಜಾಗೃತೆ ಮೂಡಿಸುವ ಕಾರ್ಯವಾಗಬೇಕಿದೆ ಹಾಗು ನಮಗೆ ಸಹಾಯ ಮಾಡಿದವರ ಋಣ ತೀರಿಸಬೇಕಿದೆ ಎಂದು ತಿಳಿಸಬೇಕು ಎಂದರು. 

ಬಡವರ ಮಕ್ಕಳಿಗೆ ಗಗನಕುಸುಮ ವಾಗಿದ್ದ ವೈದ್ಯಕೀಯ, ಇಂಜಿನಿಯ ರಿಂಗ್ ಶಿಕ್ಷಣ, ಸಿಇಟಿ ಮೂಲಕ ಬಡವರ ಮಕ್ಕಳು ಇಂದು ಡಾಕ್ಟರ್, ಇಂಜಿನಿಯರ್ ಆಗಲು ಸಾಧ್ಯವಾಗಿದೆ ಎಂದರೆ ಅದು ಕಾಂಗ್ರೆಸ್ ಪಕ್ಷದ ಕೊಡುಗೆ ಯಾಗಿದೆ ಎಂದರು.

ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್, ನಟ ಶಿವರಾಜ್ ಕುಮಾರ್, ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ.ಆರ್.ಎಂ. ಮಂಜುನಾಥಗೌಡ, ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ್, ಕಾಂಗ್ರೆಸ್ ಮುಖಂಡರಾದ ಎಂ.ಶ್ರೀಕಾಂತ್, ಅನಿಲ್ ಕುಮಾರ್ ತಡಕಲ್, ಮುಡುಬ ರಾಘವೇಂದ್ರ, ಸುಶ್ಮಾ ಸಂಜಯ್, ಸಚ್ಚೀಂದ್ರ ಹೆಗ್ಗಡೆ, ಡಾ.ಸುಂದರೇಶ್, ಹಾರೋಗಳಿಗೆ ಪದ್ಮನಾಭ್, ವೈ.ಎಚ್.ನಾಗರಾಜ್ ಮತ್ತಿತರರಿದ್ದರು.

Related Post

Leave a Reply

Your email address will not be published. Required fields are marked *