Breaking
Tue. Dec 24th, 2024

ಚಾಮರಾಜಪೇಟೆಯ ಟಿಆರ್ ಮೀಲ್ ಬಳಿ ಟೈಯರ್ ಅಂಗಡಿಯಲ್ಲಿ ಬೆಂಕಿ..!

ಬೆಂಗಳೂರು : ಬೆಂಗಳೂರು ನಗರದಲ್ಲಿ ಮತ್ತೆ ಅಗ್ನಿ ಅವಘಡ  ಸಂಭವಿಸಿದೆ. ಚಾಮರಾಜಪೇಟೆಯ ಟಿಆರ್ ಮೀಲ್ ಬಳಿ ಟೈಯರ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯ ಕೆನ್ನಾಲಿ ಗಗನದೆತ್ತರಕ್ಕೆ  ಉರಿದಿದೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ವಾಹನಗಳು ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡವು. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗಲಿರುವ ಶಂಕೆ ವ್ಯಕ್ತವಾಗಿದೆ.  ಮುಂಜಾನೆ 4:30 ಸುಮಾರಿಗೆ ಬೆಂಕಿ ಅವಘಡ ಸಂಭವಿಸಿದೆ.

5:30 ಸಮಯಕ್ಕೆ ಪೊಲೀಸರು ಮನೆಯಿಂದ ಎಲ್ಲರೂ ಹೊರಗಡೆ ಬರುವಂತೆ ಅನೌನ್ಸ್ ಮಾಡಿದರು. ಅನೌನ್ಸ್ ಮಾಡಿ ಪೊಲೀಸರು ಕರೆಯೋತನಕ ನಮಗೆ ತಿಳಿದಿರಲಿಲ್ಲ. ಅಕ್ಕಪಕ್ಕದ ಸುಮಾರು 20ಕ್ಕೂ ಹೆಚ್ಚು ಮನೆಗಳು ಖಾಲಿ ಮಾಡಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಬೆಂಕಿ ತಗಲಿರೋ ಕಟ್ಟಡದಲ್ಲಿ ಸುಮಾರು 8 ಟಯರ್ ಅಂಗಡಿಗಳು ಇದ್ದು, ಅಷ್ಟು ಕೂಡ ಹೊತ್ತಿ ಉರಿಯುತ್ತಿವೆ. ನಾವೆಲ್ಲಾ ಆತಂಕದಿಂದ ಮನೆಯಲ್ಲಿ ಕರೆಂಟ್, ಗ್ಯಾಸ್ ಗಳನ್ನೆಲ್ಲವೂ ಆಪ್ ಮಾಡಿ ಹೊರಗಡೆ ಬಂದು ನೋಡಿದಾಗ ಬೆಂಕಿಯ ಕೆನ್ನಾಲಿಗೆ ನೋಡಿ ಆತಂಕವಾಯ್ತು ಎಂದರು. 

3 ಗಂಟೆಯಿಂದ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದರೂ ಕಂಟ್ರೋಲ್ ರೂಂನಲ್ಲಿ ಪಬ್ಲಿಕ್ ಕಾಲ್ ಪಿಕ್ ಮಾಡಿಲ್ಲ. ನಾಲ್ಕೂವರೆ ಸುಮಾರಿಗೆ ಬಂದು ಬೆಂಕಿ ನಂದಿಸೋ ಕೆಲಸ ಮಾಡಲಾಗುತ್ತಿದೆ. ಒಂದೂವರೆ ಗಂಟೆ ತಡವಾಗಿ ಅಗ್ನಿಶಾಮಕ ವಾಹನಗಳು ಬಂದ ಕಾರಣ ಗೋಡೌನ್ ಸಂಪೂರ್ಣವಾಗಿ ಬೆಂಕಿ ಅವರಿಸಿಕೊಂಡಿದೆ ಎಂದು ಹೇಳಿದರು.

ಘಟನಾ ಸ್ಥಳದಲ್ಲಿ ಸಿಬ್ಬಂದಿ ಅಗ್ನಿಶಾಮಕ ವಾಹನಗಳನ್ನ ಹೆಚ್ಚಿಸಿಕೊಂಡಿದ್ದು, ಸುಮಾರು ಹತ್ತಕ್ಕೂ ಹೆಚ್ಚು ವಾಹನಗಳಲ್ಲಿ ಬೆಂಕಿ ನಂದಿಸೋ ಕೆಲಸ ನಡೆದಿದೆ. ಗೋಡೌನ್ ನಾಲ್ಕು ಮೂಲೆಗಳಿಂದ ಬೆಂಕಿ ನಂದಿಸಲಾಗಿದೆ. ಸುಮಾರು ಎರಡು ಗಂಟೆಗಳ ಪ್ರಯತ್ನದ ಬಳಿಕ ಬೆಂಕಿ ಸ್ವಲ್ಪ ಹತೋಟಿಗೆ ಬಂದಿದೆ.

Related Post

Leave a Reply

Your email address will not be published. Required fields are marked *