Breaking
Tue. Dec 24th, 2024

ವಿಭಿನ್ನ ಟೈಟಲ್ ಮೂಲಕ ಗಮನ ಸೆಳೆಯುತ್ತಿದೆ ‘ಎಲ್ಟು ಮುತ್ತಾ’  ಸಿನಿಮಾ…!

ಕನ್ನಡ ಚಿತ್ರರಂಗದಲ್ಲಿ ಯುವ ಪ್ರತಿಭೆಗಳ ಪರ್ವ ಆರಂಭವಾಗಿದೆ. ಹೊಸಬರು ಮಾಡುತ್ತಿರುವ ಸಿನಿಮಾ ಯಶಸ್ಸು ಕಾಣುತ್ತಿದೆ. ಬಗೆಬಗೆಯ ಶೀರ್ಷಿಕೆಗಳ ಮೂಲಕವೇ ಸಿನಿಮಾಗಳು ಸೆಟ್ಟೇರುತ್ತಿವೆ. ಇದೀಗ ಅಂಥದ್ದೇ ವಿಭಿನ್ನ ಟೈಟಲ್ ಮೂಲಕ ಗಮನ ಸೆಳೆಯುತ್ತಿದೆ ‘ಎಲ್ಟು ಮುತ್ತಾ’ ಸಿನಿಮಾ.

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಬಿಡುಗಡೆ ಕಲಾವಿದರ ಸಂಘದಲ್ಲಿ ‘ಎಲ್ಟು ಮುತ್ತಾ’ ಪೋಸ್ಟರ್ ಕಾರ್ಯಕ್ರಮ ಆಯೋಜಿಸಲಾಗಿದೆ. ಹೊಂಬಾಳೆ ಸಂಸ್ಥೆಯ ಸಂಸ್ಥಾಪಕ ವಿಜಯ್ ಕಿರಗಂದೂರು ಪತ್ನಿ ಶೈಲಜಾ ವಿಜಯ್ ಕಿರಗಂದೂರು, ಸಂಗೀತ ಕಟ್ಟಿ, ಎ.ಎಂ.ಆರ್ ರಮೇಶ್ ಹೊಸಬರ ಕನಸಿಗೆ ಸಾಥ್ ಕೊಟ್ಟರು. 

ನಿರ್ದೇಶಕರಾದ ರಾ ಸೂರ್ಯ ಮಾತನಾಡಿ, ಇಡೀ ತಂಡ ನನ್ನ ಮೇಲೆ ಭರವಸೆ ಇಟ್ಟಿದೆ. ಆ ಭರವಸೆ, ನನಗೆ ಏನಾದರೂ ಮಾಡಲು ಫುಶ್ ಮಾಡುತ್ತಿದೆ. ಸಾವಿಗೆ ಡೋಲು ಬಡಿಯುವವರ ಕಥೆಯನ್ನು ಎತ್ತಿಕೊಂಡು ಸಿನಿಮಾ ಮಾಡಿದ್ದೇನೆ. ಇದು ಸತ್ಯ ಘಟನೆಯ ಆಧಾರಿತ ಸಿನಿಮಾ. ಅದನ್ನು ಫಿಕ್ಷನ್ ನಲ್ಲಿ ಹೇಳಿದ್ದೇನೆ. ಸಿನಿಮಾದಲ್ಲಿ 4 ಹಾಡುಗಳಿವೆ. ಒಂದು ಡಬ್ಬಿಂಗ್ ಮುಗಿದಿದೆ ಎಂದು ಹೇಳಿದರು.

‘ಎಲ್ಟು ಮುತ್ತಾ’ ಸಿನಿಮಾ ಮೂಲಕ ಯುವ ಪ್ರತಿಭೆ ರಾ ಸೂರ್ಯ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಒಂದಷ್ಟು ಕಿರುಚಿತ್ರ ನಿರ್ದೇಶನದ ಅನುಭವವನ್ನು ಇಟ್ಟುಕೊಂಡು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ವೈದ್ಯಕೀಯ ಹಿನ್ನೆಲೆಯುಳ್ಳ ಸೂರ್ಯ ಅವರಿಗೆ ಸಿನಿಮಾ ಮೇಲಿನ ಸೆಳೆತ ಅವರನ್ನು ಚಿತ್ರರಂಗಕ್ಕೆ ಕರೆದು ತಂದು ನಿಲ್ಲಿಸಿದೆ. ‘ಎಲ್ಟು ಮುತ್ತಾ’ ಸಿನಿಮಾ ಮೂಲಕ ಯುವ ನಟ ಶೌರ್ಯ ಪ್ರತಾಪ್ ನಾಯಕನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇವರಿಗೆ ನಾಯಕಿಯಾಗಿ ಪ್ರಿಯಾಂಕಾ ಸಾಥ್ ಕೊಟ್ಟಿದ್ದಾರೆ. ಕಾಕ್ರೋಚ್ ಸುಧಿ, ಯಮುನಾ ಶ್ರೀನಿಧಿ, ನವೀನ್ ಪಡಿಲ್ ತಾರಾಬಳಗದಲ್ಲಿದ್ದಾರೆ. 

 ನೈಜಯಾಧಾರಿತ ‘ಎಲ್ಲ ಘಟನೆ ಮುತ್ತಾ’ ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಮಡಿಕೇರಿ ನೆಲಜಿಯಲ್ಲಿ ನಡೆಯುತ್ತಿರುವ ಶೂಟಿಂಗ್. ಉಳಿದಂತೆ ಬೆಂಗಳೂರು ಸುತ್ತಮುತ್ತ ಕೂಡ ಚಿತ್ರೀಕರಿಸಲಾಗಿದೆ. ನಿರ್ದೇಶಕ ರಾ ಸೂರ್ಯ, ನಾಯಕ ಶೌರ್ಯ ಪ್ರತಾಪ್, ಪ್ರಸನ್ನ ಕೇಶವ, ರುಹಾನ್ ಆರ್ಯ ಹಾಗೂ ಬಸವರಾಜೇಶ್ವರಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. 

ಏಳು ಮುತ್ತಾ’ ಅಂದರೆ ಚಿತ್ರದ ಎರಡು ಪಾತ್ರಗಳ ಹೆಸರು. ಶೌರ್ಯ ಪ್ರತಾಪ್ ನಾಯಕನಾಗಿ ಬಣ್ಣ ಹಚ್ಚುವುದರ ಜೊತೆಗೆ ಸಹ ನಿರ್ದೇಶಕರಾಗಿ ಹಾಗೂ ಸಹ ಬರಗಾರನಾಗಿ ಸೂರ್ಯ ಅವರಿಗೆ ಜೊತೆಯಾಗಿ ನಿಂತಿದ್ದಾರೆ. ಪ್ರಸನ್ನ ಕೇಶವ ಸಂಗೀತ, ಮೆಯ್ಯಪ್ಪ ಭಾಸ್ಕರ್ ಛಾಯಾಗ್ರಹಣ, ಕೆ.ಯೇಸು ಸಂಕಲನ, ಜ್ಞಾನತಿ ರಾಹುಲ್ ನೃತ್ಯ ಸಂಯೋಜನೆ ಚಿತ್ರಕ್ಕಿದೆ. ಅಜಿತ್ ಕೇಶವ, ರಾ ಸೂರ್ಯ ಹಾಗೂ ಶೌರ್ಯ ಪ್ರತಾಪ್ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ.

Related Post

Leave a Reply

Your email address will not be published. Required fields are marked *