ಬಾಗಲಕೋಟೆ , ಏ.06 : ಬಾಗಲಕೋಟೆ ಲೋ ಕಸಭಾ ಕ್ಷೇತ್ರದ ಟಿಕೆಟ್ ಕೈತಪ್ಪಿದ, ‘ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸಿ, ಯುಗಾದಿ ನಂತರ ಅಂತಿಮ ನಿರ್ಧಾರ ಹೇಳುತ್ತೇನೆ ಎಂದು ವೀಣಾ ಕಾಶಪ್ಪನವರ್ ಸ್ಪಷ್ಟಪಡಿಸಿದರು. ಬಾಗಲಕೋಟೆಯಲ್ಲಿ ಬೆಂಬಲಿಗರ ಜೊತೆ ಸಭೆ ಬಳಿಕ ಮಾತನಾಡಿದ ಅವರು, ಕೆಲವರು ಪಕ್ಷೇತರರಾಗಿ ಹೇಳಿದ್ದಾರೆ.
ಸ್ಥಾನಮಾನ ನೀಡಿ ಎಂದು ಹೈಕಮಾಂಡ್‌ಗೆ ಮನವಿ ಮಾಡಲಾಗಿದೆ. ಇನ್ನೂ ಕೆಲ ಬೆಂಬಲಿಗರು ತಟಸ್ಥರಾಗಿ ಉಳಿಯುವಂತೆ ಹೇಳುತ್ತಿದ್ದಾರೆ. ಈ ಹಿನ್ನಲೆ ಅವರ ಭಾಗದಲ್ಲಿ ಸರ್ವೆ ಮಾಡಿಸುವಂತೆ ಬೆಂಬಲಿಗರಿಗೆ ಸೂಚಿಸಲಾಗಿದೆ.
ಸರ್ವೆ ವರದಿ ನೋಡಿ ಯುಗಾದಿ ನಂತರ ಮುಂದಿನ ತೀರ್ಮಾನ ತಿಳಿಸುತ್ತೇನೆ. ಜೊತೆಗೆ ಶಿವಾನಂದ ಪಾಟೀಲ್ ಹಾಗೂ ಸಂಯುಕ್ತಾ ಮನೆಗೆ ಬಂದ್ರೆ ಕೂರಿಸಿ ಮಾತನಾಡುವೆ. ನನಗೆ ಆಗಿರುವ ಅನ್ಯಾಯದ ಬಗ್ಗೆ ತಿಳಿಸುತ್ತೇನೆ. ಬಳಿಕ ನನ್ನ ಅಭಿಪ್ರಾಯ ಪಡೆದು ತೀರ್ಮಾನ ತೆಗೆದುಕೊಳ್ಳುತ್ತೇನೆ.