ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆ ಕೋಲಾರ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆ ಪ್ರಕಾರ, ಒಟ್ಟು 513 ಅಂಗನವಾಡಿ ಕಾರ್ಯಕರ್ತೆ & ಅಂಗನವಾಡಿ ಸಹಾಯಕಿ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.
ಏಪ್ರಿಲ್ 19, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್ಲೈನ್ (Online) ಮೂಲಕ ಅರ್ಜಿ ಕಳುಹಿಸಬೇಕು. ರಾಜ್ಯ ಸರ್ಕಾರದ ಉದ್ಯೋಗ ಹುಡುಕುತ್ತಿದ್ರೆ ಈಗಲೇ ಅಪ್ಲೈ ಮಾಡಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕೋಲಾರದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ. ಹುದ್ದೆಯ ಮಾಹಿತಿ : ಅಂಗನವಾಡಿ ಕಾರ್ಯಕರ್ತೆ- 120ಅಂಗನವಾಡಿ ಸಹಾಯಕಿ – 393
ವಿದ್ಯಾರ್ಹತೆ : ಅಂಗನವಾಡಿ ಕಾರ್ಯಕರ್ತೆ- 12ನೇ ತರಗತಿ, SSLC
ಅಂಗನವಾಡಿ ಸಹಾಯಕಿ – 10ನೇ ತರಗತಿ
ವೇತನ : ನಿಗದಿಪಡಿಸಿಲ್ಲ.
ಉದ್ಯೋಗದ ಸ್ಥಳ : ಕೋಲಾರ
ವಯೋಮಿತಿ: ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆ ಬೀದರ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಕನಿಷ್ಠ 19 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ : PWD ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಅರ್ಜಿ ಶುಲ್ಕ: ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.
ಆಯ್ಕೆ ಪ್ರಕ್ರಿಯೆ : ಮೆರಿಟ್ ಲಿಸ್ಟ್ ಮತ್ತು ಸಂದರ್ಶನ ಅರ್ಜಿ ಹಾಕೋದು ಹೇಗೆ? ಅಭ್ಯರ್ಥಿಗಳು ಆನ್ಲೈನ್ ಮೂಲಕ ಅಪ್ಲೈ ಮಾಡಬೇಕು ಎಂದು ನೋಟಿಫಿಕೇಶನ್ನಲ್ಲಿ ತಿಳಿಸಲಾಗಿದೆ.
ನೇರವಾಗಿ ಅಪ್ಲೈ ಮಾಡಲು ಲಿಂಕ್ನ್ನು ಈ ಕೆಳಗೆ ನೀಡಲಾಗಿದೆ. ಆನ್ಲೈನ್ ಮೂಲಕ ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ https://karnemakaone.kar.nic.in/abcd/home.aspx
ಪ್ರಮುಖ ದಿನಾಂಕಗಳು : ಅರ್ಜಿ ಸಲ್ಲಿಕೆ ಆರಂಭ. ದಿನಾಂಕ: 12/03/2024. ಅರ್ಜಿ ಸಲ್ಲಿಸಲು ಕೊನೆಯ ದಿನ : ಏಪ್ರಿಲ್ 19, 2024