ಬಾಲಿವುಡ್ ಹೀರೋ ಅಕ್ಷಯ್ ಕುಮಾರ್‌ಗೆ ಹಿಂದಿ ಸಿನಿಮಾರಂಗದಲ್ಲೇ ಭಾರೀ ಬೇಡಿಕೆ ಇದೆ. ಇದರ ನಡುವೆ ಟಾಲಿವುಡ್‌ನಲ್ಲಿ ಅಕ್ಷಯ್ ಕುಮಾರ್ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಈಗ ವಿಷ್ಣು ಮಂಚು ನಟನೆಯ ‘ಕಣ್ಣಪ್ಪ’ ಸಿನಿಮಾಗೆ ಸಾಥ್ ನೀಡಲಿದ್ದಾರೆ.
ಇದೀಗ ಸಿನಿಮಾರಂಗದಲ್ಲಿ ಹೆಚ್ಚೆಚ್ಚು ಸಕ್ಸಸ್ ಕಾಣುತ್ತಿರುವ ಸಿನಿಮಾಗಳಂದ್ರೆ ದಕ್ಷಿಣದ ಸಿನಿಮಾಗಳು. ಅದಕ್ಕಾಗಿಯೇ ಈಗಾಗಲೇ ಮೃಣಾಲ್ ಠಾಕೂರ್ , ಜಾನ್ವಿ ಕಪೂರ್ , ಬಾಬಿ ಡಿಯೋಲ್, ಸಂಜಯ್ ದತ್, ಸನ್ನಿ ಲಿಯೋನ್ ಹೀಗೆ ಅನೇಕರು ಬಾಲಿವುಡ್‌ನಿಂದ ಟಾಲಿವುಡ್‌ಗೆ ಬಂದು ಸಕ್ಸಸ್ ಕಂಡಿದ್ದಾರೆ. ಅದೇ ಹಾದಿಯಲ್ಲಿ ಅಕ್ಷಯ್ ಕುಮಾರ್ ಕೂಡ ಹೆಜ್ಜೆ ಇಡುತ್ತಿದ್ದಾರೆ.
ಬಿಗ್ ಬಜೆಟ್‌ನಲ್ಲಿ ಕಣ್ಣಪ್ಪ ಸಿನಿಮಾ ಮೂಡಿ ಬರಲಿದೆ. ಮಲ್ಟಿ ಸ್ಟಾರ್‌ಗಳು ಈ ಸಿನಿಮಾದಲ್ಲಿ ನಟಿಸುತ್ತಿರುವ ಕಾರಣ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.