Breaking
Tue. Dec 24th, 2024

ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಧನುಷ್ ಮತ್ತು ಐಶ್ವರ್ಯ

ಜನವರಿ 2022ರಲ್ಲೇ ಘೋಷಿಸಿದ್ದು ಈಗ ಕೋರ್ಟ್  ಮೆಟ್ಟಿಲು ಏರಿದೆ. ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ  ಅರ್ಜಿ ಸಲ್ಲಿಸಲಾಗಿದೆ ಎಂದು ಆಪ್ತರು ಖಚಿತ ಪಡಿಸಿದ್ದಾರೆ ಎಂದು ಆಗ್ಲಂ ವೆಬ್ ಸೈಟ್ ವೊಂದು ವರದಿ ಮಾಡಿದೆ. ಪರಸ್ಪರ ಒಪ್ಪಿಗೆಯಿಂದ ಸೆಕ್ಷನ್ 13 ರ ಅಡಿಯಲ್ಲಿ ಅವರು ಡಿವೋರ್ಸ್ ಗೆ ಅರ್ಜಿ ಸಲ್ಲಿಸಿದ್ದಾರೆ. 

ಪರಸ್ಪರ ಪ್ರೀತಿಸಿ ಮದುವೆಯಾದ ಈ ಜೋಡಿಗೆ 18 ವರ್ಷಗಳ ನೆನಪುಗಳಿವೆ. ಲಿಂಗ ಮತ್ತು ಯಾತ್ರಾ ಹೆಸರಿನ ಇಬ್ಬರು ಪುತ್ರರೂ ಇದ್ದಾರೆ. ಐಶ್ವರ್ಯ ನಿರ್ದೇಶಕಿಯಾಗಿ ಹಲವಾರು ಚಿತ್ರಗಳನ್ನು ಮಾಡಿದ್ದಾರೆ, ಧನುಷ್ ನಟನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿ ಸಾಕಷ್ಟು ಹೆಸರು ಮಾಡಿದ್ದಾರೆ.

ಈ ಜೋಡಿ ದೂರ ಆಗಿರುವುದು ಖಂಡಿತಾ ಅಭಿಮಾನಿಗಳಿಗೆ ಶಾಕ್ ಆಗಿದೆ. ವಿಚ್ಛೇದನ ಘೋಷಿಸಿದ ನಂತರ ಎಲ್ಲರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಧನುಷ್ ಸಿನಿಮಾಗೆ ಐಶ್ವರ್ಯ, ಪತ್ನಿಯ ಚಿತ್ರಕ್ಕೆ ಧನುಷ್ ಅಭಿನಂದನೆ ಸಲ್ಲಿಸುತ್ತಾ, ಮತ್ತೆ ಒಂದಾಗುವ ಸೂಚನೆ ಎನ್ನುವಂತೆ ದಿನಗಳನ್ನು ದೂಡಿದರು. ಎರಡು ವರ್ಷಗಳ ನಂತರ ಮತ್ತೆ ಶಾಕ್ ನೀಡಿದೆ ಈ ಜೋಡಿ.

ನಟ ಧನುಷ್  ಕೂಡ ಖಚಿತ ಪಡಿಸಿದ್ದರು. ಅದಾದ ನಂತರ ಇಬ್ಬರನ್ನೂ ಒಟ್ಟಾಗಿಸುವ ಪ್ರಯತ್ನ. ರಜನಿಕಾಂತ್ ಅವರೇ ಇಬ್ಬರಿಗೂ ಮಾತನಾಡಿದ್ದರು. ಆದರೆ, ಪ್ರಯತ್ನ ವಿಫಲವಾಗಿದೆ.

Related Post

Leave a Reply

Your email address will not be published. Required fields are marked *