ಬೆಂಗಳೂರು : ನಿವೃತ್ತ ಐಎಸ್‌ಎಸ್ ಅಧಿಕಾರಿ ದಿವಂಗತ ಕೆ.ಶಿವರಾಮ್ ಪತ್ನಿ ವಾಣಿ ಸೋಮವಾರ ಕಾಂಗ್ರೆಸ್ ಸೇರ್ಪಡೆಯಾದರು.
ಕೆಪಿಸಿಸಿ ಕಚೇರಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು. ವಾಣಿ ಶಿವರಾಮ್ ಅವರಿಗೆ ಪಕ್ಷದ ಶಾಲು ಹೊದಿಸಿ, ಧ್ವಜ ನೀಡಿ ಪಕ್ಷಕ್ಕೆ ಡಿ.ಕೆ.ಶಿವಕುಮಾರ್ ಬರಮಾಡಿಕೊಂಡರು. ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೆ ಮಾಜಿ ಸಂಸದೆ ತೇಜಸ್ವಿನಿ ಗೌಡ ಆಗಮಿಸಿದ್ದರು.
ವೇಳೆ ಮಾತನಾಡಿದ ವಾಣಿ ಶಿವರಾಮ್, ಬಿಜೆಪಿಯಿಂದ ನಮ್ಮ ಯಜಮಾನರಿಗೆ (ಕೆ.ಶಿವರಾಮ್) ಅನ್ಯಾಯ ಆದಕ್ಕೆ ಮತ್ತು ಸಾವಿಗೆ ನ್ಯಾಯ ಕೊಡಿ ಎಂದು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ.
ಕಾಂಗ್ರೆಸ್ ಪಕ್ಷ ನನ್ನನ್ನು ಗುರುತಿಸಿ ಕೈ ಹಿಡಿದಿದೆ. ನಿಮ್ಮೆಲ್ಲರ ಸೇವೆಗಾಗಿ ನಾನು ಸದಾ ಇರುತ್ತೇನೆ. ನನ್ನ ಪತಿಯ ಕೊನೆ ಆಸೆಗಳನ್ನು ತೋರಿಸಲು ಕಾಂಗ್ರೆಸ್ ಪಕ್ಷದಲ್ಲಿ ನಾನು ಇರುತ್ತೇನೆ. ನಮ್ಮ ಯಜಮಾನರಿಗೆ ಅನ್ಯಾಯಕ್ಕೆ ನೀವೆಲ್ಲ ಬರುವ ಲೋಕಸಭಾ ಚುನಾವಣೆಯಲ್ಲಿ ಉತ್ತರ ಕೊಡಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.