ನವದೆಹಲಿ : ವರ್ಷದ ಮೊದಲ ಸೂರ್ಯಗ್ರಹಣವು ಅಂದರೆ, 2024ರ ಮೊದಲ ಸೂರ್ಯಗ್ರಹಣ ಇಂದು ಅಮಾವಾಸ್ಯೆಯಂದೇ ಸಂಭವಿಸುತ್ತಿದೆ. 50 ವರ್ಷಗಳ ಸೌರಮಂಡಲದಲ್ಲಿ ವಿಸ್ಮಯವೊಂದು ಸಂಭವಿಸ್ತಿದೆ. ಆದರೆ ಈ ಬಾರಿಯ ಕೌತುಕ ನೋಡಲು ಭಾರತೀಯರಿಗೆ ಸಾಧ್ಯವಿಲ್ಲ. ಕಾರಣ ಈ ಬಾರಿಯ ಖಗ್ರಾಸ ಗ್ರಹಣ ಭಾರತದಲ್ಲಿ ಗೋಚರ ಆಗುತ್ತಿಲ್ಲ.
ವರ್ಷದ ಮೊದಲ ಸೂರ್ಯಗ್ರಹಣ ಭಾರತೀಯ ಕಾಲಮಾನದ ಪ್ರಕಾರ, ಇಂದು ರಾತ್ರಿ 9:12ಕ್ಕೆ ಆರಂಭವಾಗಿ ಮಧ್ಯರಾತ್ರಿ 2:22 ರವರೆಗೆ ಇರುತ್ತದೆ. ಈ ಸೂರ್ಯಗ್ರಹಣದ ಒಟ್ಟು ಅವಧಿ 5 ಗಂಟೆ 10 ನಿಮಿಷಗಳಾಗಿರುತ್ತದೆ. ಆದರೆ ಅದರಲ್ಲಿ ಸುಮಾರು ಏಳೂವರೆ ನಿಮಿಷಗಳು ಭೂಮಿ ಕತ್ತಲೆಯಾಗಿರಲಿದೆ.
ಅಮೆರಿಕ, ಮೆಕ್ಸಿಕೊ, ಕೆನಡಾ, ಐರ್ಲೆಂಡ್, ಇಂಗ್ಲೆಂಡ್‍ನಂತಹ ದೇಶಗಳಲ್ಲಿ ಮಾತ್ರ ಗ್ರಹಣ ಸ್ಪಷ್ಟ ಗೋಚರ ಆಗಲಿದೆ. ಪೆಸಿಫಿಕ್ ಕರಾವಳಿಯ ಪ್ರದೇಶದ ಮೆಕ್ಸಿಕೋದಲ್ಲಿ ಮೊದಲು ಸೂರ್ಯಗ್ರಹಣ ಗೋಚರವಾಗಲಿದೆ. ಅಲ್ಲದೆ ಟೆಕ್ಸಾಸ್, ಒಕ್ಲಹೋಮ, ಅರ್ಕಾನ್ಸಾಸ್, ಮಿಸೌರಿ, ಇಲಿನಾಯ್ಸ್, ಕೆಂಟುಕಿ, ಇಂಡಿಯಾನಾ, ಓಹಿಯೋ, ಪೆನ್ಸಿಲ್ವೇನಿಯಾ, ನ್ಯೂಯಾರ್ಕ್, ವಮೊರ್ಂಟ್, ನ್ಯೂ ಹ್ಯಾಂಪ್‍ಶೈರ್ ಮತ್ತು ಮೈನೆ ಮೊದಲಾದ ರಾಜ್ಯಗಳಲ್ಲಿ ಸಂಪೂರ್ಣ ಸೂರ್ಯಗ್ರಹಣ ಗೋಚರವಾಗುವುದು.