ಮಾಣಿಕ್ಯ’ ನಟಿ ವರಲಕ್ಷ್ಮಿ ಶರತ್ಕುಮಾರ್ ಇತ್ತೀಚೆಗೆ ಗ್ರ್ಯಾಂಡ್ ಆಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಇದೀಗ ವರಲಕ್ಷ್ಮಿ ಮತ್ತು ನಿಕೋಲೈ ಸಚ್ದೇವ್ ಜೋಡಿಯನ್ನು ಕಿಚ್ಚ ಸುದೀಪ್ ಫ್ಯಾಮಿಲಿ ಭೇಟಿ ಮಾಡಿದೆ. ಮೀಟ್ ಆಗಿರುವ ಸುಂದರ ಫೋಟೋಗಳು ಸಾಮಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ವರಲಕ್ಷ್ಮಿ, ನಿಕೋಲೈ ಜೋಡಿಯನ್ನು ಸುದೀಪ್, ಪ್ರಿಯಾ ಸುದೀಪ್ , ಪುತ್ರಿ ಸಾನ್ವಿ, ಸೋದರಳಿಯ ಸಂಚಿತ್ ಸಂಜೀವ್ ಕೂಡ ಭೇಟಿಯಾಗಿದ್ದಾರೆ. ಉತ್ತಮ ಸಮಯ ಕಳೆದಿದ್ದಾರೆ.
ಮಾರ್ಚ್ 1ರಂದು ಮುಂಬೈನಲ್ಲಿ ವರಲಕ್ಷ್ಮಿ, ನಿಕೋಲೈ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡರು. ಕುಟುಂಬಸ್ಥರು, ಆಪ್ತರು ಅಷ್ಟೇ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವರ್ಷದ ಅಂತ್ಯದಲ್ಲಿ ನಟಿಯ ಮದುವೆ ಫಿಕ್ಸ್ ಆಗಿದೆ.
ಸುದೀಪ್ ಜೊತೆ ವರಲಕ್ಷ್ಮಿ ಮಾಣಿಕ್ಯ , ರನ್ನ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಂದಿನಿಂದ ಸುದೀಪ್ ಮತ್ತು ಅವರ ಕುಟುಂಬದ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ. ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾದಲ್ಲಿಯೂ ವರಲಕ್ಷ್ಮಿ ನಟಿಸಿದ್ದಾರೆ ಎನ್ನಲಾಗಿದೆ.