ಬೆಂಗಳೂರು : ಯುಗಾದಿ ಹಬ್ಬದ ದಿನವೇ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯು ಪರೀಕ್ಷೆಯ ಫಲಿತಾಂಶ ಬುಧವಾರ ಪ್ರಕಟಗೋಳ್ಳುತ್ತಿರುವುದು ಸಂತಸದ ವಿಷಯವಾಗಿದೆ. ನಾಳೆ ಬೆಳಗ್ಗೆ 10 ಗಂಟೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳಿಂದ ಸುದ್ದಿಗೋಷ್ಠಿ ನಡೆಸಿದ ಬಳಿಕ ವೆಬ್ ಸೈಟ್‌ನಲ್ಲಿ ಫಲಿತಾಂಶ ಪ್ರಕಟವಾಗಿದೆ.
ಈ ಬಾರಿ ಫಲಿತಾಂಶದಲ್ಲಿ ಯಾರೂ ಮೇಲ್ಗೈ ಸಾಧಿಸುತ್ತಾರೆ ಎಂಬ ಕೌತುಕ ಮೂಡಿದೆ. ಪ್ರತಿ ಸಾರಿ ಹೆಣ್ಮಕ್ಳು ಸ್ಟ್ರಾಂಗ್ ಎಂಬ ಶಬ್ದಕ್ಕೆ ಗಂಡು ಮಕ್ಕಳು ನಾಂದಿ ಹಾಡುತ್ತಾರ ಕಾದು ನೋಡಬೇಕು?
ರಾಜ್ಯಾದ್ಯಂತ ಈ ಬಾರಿ 1,124 ಕೇಂದ್ರಗಳಲ್ಲಿ 6.98 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 2023-24 ಸಾಲಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ 80-20 ಮಾದರಿಯಲ್ಲಿ ಇರುತ್ತದೆ. ವಿದ್ಯಾರ್ಥಿಗಳು ಲಿಖಿತ ರೂಪದಲ್ಲಿ 80 ಅಂಕಗಳಿಗೆ ಪರೀಕ್ಷೆ ಬರೆಯುತ್ತಾರೆ. ಇನ್ನು ಉಳಿದ 20 ಅಂಕಗಳು ಆಂತರಿಕ ಮೌಲ್ಯಮಾಪನದ ಮೂಲಕ.
ವಿದ್ಯಾರ್ಥಿಗಳು ಮತ್ತು ಪೂರಕ ಶಿಕ್ಷಣ ಇಲಾಖೆಯ ವೆಬ್‌ಸೈಟ್ www.karresultsnic.in ಭೇಟಿ ನೀಡಿ ಫಲಿತಾಂಶವನ್ನು ವೀಕ್ಷಿಸಬಹುದು. ಎಲ್ಲ ವಿದ್ಯಾರ್ಥಿ ವೃಂದದವರಿಗೂ ಹೊಸ ವರ್ಷದ ದಿನದಂದು ನಿಮ್ಮ ಬಾಳಲ್ಲಿ ಹೊಸತನ ಮೂಡಲಿ ಎಂದು ಹಾರೈಸುತ್ತೇವೆ. ಎಲ್ಲಾ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಲೆಂದು ಹಾರೈಸುತ್ತೇವೆ. ಇಂತಿ ನಿಮ್ಮ ನೆಚ್ಚಿನ ಆವಿಷ್ಕಾರ್ ನ್ಯೂಸ್