ಚಿತ್ರದುರ್ಗ, ಏಪ್ರಿಲ್.10 : ನಗರದ ಕೆಎಂಎಸ್ ಸ್ವತಂತ್ರ ಪ.ಪೂ ಕಾಲೇಜಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, 2023-2024 ನೇ ಸಾಲಿನಲ್ಲಿ ಶೇ 92 ಫಲಿತಾಂಶ ಬಂದಿದೆ.
ಆಂಜಿಲಾ ಅಲ್ಮಂಡ್ ಸರ್ಕಿಸ್ 600ಕ್ಕೆ 559 ಅಂಕಗಳನ್ನು (ಶೇ 93) ಪಡೆದು ಪ್ರಥಮ ಸ್ಥಾನ ಗಳಿಸಿದ್ದಾರೆ. ಆಕಾಶ್.ಎನ್ 457 (ಶೇ76) ದ್ವಿತೀಯ ಸ್ಥಾನ, ಜೀವನ್.ಜಿ 400 (ಶೇ 67) ತೃತೀಯ ಸ್ಥಾನ ಪಡೆದಿದ್ದಾರೆ.
ಬಾಪೂಜಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಡಾ.ಕೆಎಂ ವೀರೇಶ್, ನಿರ್ದೇಶಕ ಕೆಎಂ ಚೈತನ್ಯ, ಪ್ರಾಚಾರ್ಯ ಜಿಎನ್ ವೀರೇಶ್, ಕೆಎಂಎಸ್ ಪ್ರ.ದ.ಕಾಲೇಜಿನ ಪ್ರಾಚಾರ್ಯೆ ಡಾ.ಕೆ.ಮಂಜುಳ ಹಾಗೂ ಉಪನ್ಯಾಸಕ ಬಳಗ ಅಭಿನಂದಿಸಿದ್ದಾರೆ.