ಬೆಂಗಳೂರು : ರಾಜ್ಯದಲ್ಲಿ ಲೋಕಸಭಾ ಚುನಾವಣಾ ಪ್ರಚಾರವು ಬರದಿಂದ ಸಾಗಿದ್ದು , ಮತದಾರರನ್ನು ಸೆಳೆಯಲು ಮೈತ್ರಿ ಪಕ್ಷವು ತನ್ನ ಸ್ಥಾನವನ್ನು ಗಿಟ್ಟಿಸಿಕೊಳ್ಳಲು ಹಲವಾರು ರಣತಂತ್ರಗಳನ್ನು ಹೆಣೆಯುತ್ತಿದೆ ಇದರ ಬೆನ್ನಲ್ಲೇ ಮೈತ್ರಿ ಒಕ್ಕಲಿಗ ನಾಯಕರ ಶಕ್ತಿಪ್ರದರ್ಶನಕ್ಕೂ ಮುನ್ನ ಇಂದು ದೋಸ್ತಿ ನಾಯಕರ ದಂಡು ಆದಿಚುಂಚನಗಿರಿ ಮಠಕ್ಕೆ ತೆರಳಿದೆ.
ಹೆಚ್.ಡಿ ಕುಮಾರಸ್ವಾಮಿ, ಆರ್.ಅಶೋಕ್, ಸಿ.ಟಿ ರವಿ, ಶೋಭಾ ಕರಂದ್ಲಾಜೆ, ವಿ. ಸೋಮಣ್ಣ, ಅಶ್ವಥ್ ನಾರಾಯಣ್, ಪಿಸಿ ಮೋಹನ್, ಯದುವೀರ್ ಒಡೆಯರ್, ನಿಖಿಲ್, ಬೆಂಗಳೂರು ಗ್ರಾ.ಪಂ., ಅಭ್ಯರ್ಥಿ ಸಿಎನ್ ಮಂಜುನಾಥ್ ವಿದ್ಯಾರ್ಥಿ ಮಠಕ್ಕೆ ಭೇಟಿ ನೀಡಿ ನಿರ್ಮಲಾನಂದ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.
ಈ ವೇಳೆ ಮಾತನಾಡಿದ ಹೆಚ್‌ಡಿಕೆ, ಶ್ರೀಗಳ ಆಶೀರ್ವಾದ ಪಡೆಯಲಿಕ್ಕೆ ಮೈತ್ರಿ, ಅಭ್ಯರ್ಥಿಗಳು ಸಹ ಬಂದಿದ್ದೇವೆ. ಹೊಸತೊಡಕು ಸಂಭ್ರಮಕ್ಕೆ ಎಲ್ಲರನ್ನೂ ಆಹ್ವಾನಿಸಿದ್ದೇನೆ. ಅಲ್ಲೇನು ರಾಜಕೀಯ ಇಲ್ಲ. ಸಮುದಾಯ ಪ್ಲೇ ಕಾರ್ಡ್ ಅನ್ನೋಕೆ ಆಗಲ್ಲ ಎಂದರು.
ಮೊದಲ ಚುನಾವಣಾ ಅಭ್ಯರ್ಥಿಗಳು ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದೇವೆ. ಬೆಂಗಳೂರಿನ 4 ಅಭ್ಯರ್ಥಿಗಳು, ಮೈಸೂರಿನ ಅಭ್ಯರ್ಥಿ, ಕೋಲಾರದ ಅಭ್ಯರ್ಥಿ, ತುಮಕೂರು, ಮಂಡ್ಯದ ನಾನು ಎಲ್ಲಾ ಜೊತೆಗೂಡಿ ಆಶೀರ್ವಾದ ಪಡೆದಿದ್ದೇವೆ. ವರ್ಷದ ಮೊದಲ ದಿನ ಗುರುಗಳ ಆಶೀರ್ವಾದ ಪಡೆಯೋದು ನಮ್ಮ ಕರ್ತವ್ಯ. ಬಳಿಕ ನಾವೆಲ್ಲ ಒಟ್ಟಾಗಿ ಹೊಸತೊಡಕು ಆಚರಣೆ ಶುಭ ಹಾರೈಸಿದರು.
ಮುಖ್ಯಮ್ಮತ್ರಿಗಳಿಗೆ ಈಗ ಒಕ್ಕಲಿಗರು ಕಾಣುತ್ತಿದ್ದಾರೆ. ಅವರಿಗೆ ಅಸ್ಥಿರತೆ ಕಾಡುತ್ತಿರೋ ಕಾರಣ ಈಗ ಬರುತ್ತಾ ಇದ್ದಾರೆ. ಇವರ ಸರ್ಕಾರದಲ್ಲಿ ಹೇಗೆ ನಡೆಸಿದೆ ಅನ್ನೋದು ಗೊತ್ತಿದೆ. ನಾವಿಲ್ಲಿ ಡಿಕೆ ಶಿವಕುಮಾರ್ ರೀತಿ ಟಿವಿ ಕುಕ್ಕರ್ ಕೊಡುವ ಕಾರ್ಯಕ್ರಮ ಅಲ್ಲ. ಜಸ್ಟ್ ಗೆಟ್ಟು ಗೆದರ್ ಅಷ್ಟೇ ಎಂದು ಹೆಚ್ಡಿಕೆ ಸ್ಪಷ್ಟಪಡಿಸಿದರು.
ನಿರ್ಮಲಾನಂದ ಶ್ರೀಗಳ ಮೈತ್ರಿ ಅಭ್ಯರ್ಥಿಗಳು ಪಡೆದಿದ್ದೇವೆ. ಪ್ರಜಾಪ್ರಭುತ್ವ ಯುದ್ಧದಲ್ಲಿ ಗುರು ರಕ್ಷೆ ಬೇಕು ಎಂದು ಸಿ.ಟಿ ರವಿ ಹೇಳಿದ್ದಾರೆ. ಭಾರತ ವಿಶ್ವಗುರು ಆಗಬೇಕು ಮೋದಿ ಪ್ರಧಾನಿಯಾಗಬೇಕು. ಯಾವುದೇ ಆಶೀರ್ವಾದ ಪಡೆಯಲು ಬಂದಿದ್ದೇವೆ. ಸನಾತನ ಧರ್ಮ ವಿರೋಧಿಯಾಗಿ ವರ್ತಿಸುತ್ತಿದ್ದಾರೆ. ಧರ್ಮವನ್ನ ಡೆಂಗ್ಯೂ ಮಲೇರಿಯಾಗೆ ಹೋಲಿಕೆ ಮಾಡಿದ್ದರು. ಮಠ ದೇವಾಸ್ಥಾನ ಸನಾತನ ಧರ್ಮಗಳ ಪ್ರತೀಕ. ದೇವಸ್ಥಾನ ನಾಶವಾಗಬೇಕು ಅನ್ನೋದು ಅವರ ಉದ್ದೇಶ. ಸನಾತನ ಧರ್ಮ ಉಳಿವಿಗಾಗಿ ಮತ್ತೆ ಮೋದಿಯವರು ಬೇಕು ಎಂದು ಹೇಳಿದರು.