ಮುಂಬೈನಲ್ಲಿ ನೆಲೆಸಿರುವ ರವೀನಾ ಟಂಡನ್ ಬಾಲಿವುಡ್ ಚಿತ್ರರಂಗದ ಪ್ರಮುಖ ನಟಿ. ಪರಭಾಷೆಯ ಕೆಲ ಬೆರೆಳೆಣಿಕೆಯ ಚಿತ್ರಗಳಲ್ಲಿ ನಟಿಸಿರುವ ಇವರು ಕನ್ನಡದಲ್ಲಿ ಉಪೇಂದ್ರ ನಿರ್ದೇಶಿಸಿ ನಟಿಸಿದ `ಉಪೇಂದ್ರ’ ಚಿತ್ರದಲ್ಲಿ ನಟಿಸಿದ್ದಾರೆ.
ರವೀನಾ ಟಂಡನ್ ನಟಿ, ನಿರ್ಮಾಪಕಿ ಮತ್ತು ಮಾಜಿ ಮಾಡೆಲ್. ಅವರು ಬಾಲಿವುಡ್, ತೆಲುಗು, ತಮಿಳು ಮತ್ತು ಕನ್ನಡ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಟಂಡನ್ ಅವರು ಪತ್ತರ್ ಕೆ ಫೂಲ್ (1991) ಚಿತ್ರದ ಮೂಲಕ ತಮ್ಮ ನಟನೆಯನ್ನು ಪ್ರಾರಂಭಿಸಿದರು. ಅವರು ದಿಲ್ವಾಲೆ (1994), ಮೊಹ್ರಾ (1994), ಖಿಲಾಡಿಯೋನ್ ಕಾ ಖಿಲಾಡಿ (1996) ಮತ್ತು ಜಿದ್ದಿ (1997) ನಂತಹ ಹಲವಾರು ವಾಣಿಜ್ಯ ಯಶಸ್ಸಿನಲ್ಲಿ ಕಾಣಿಸಿಕೊಂಡರು.
ಅಕ್ಸ್ (2001), ಸತ್ತಾ (2003), ಶೂಲ್ (1999), ಮತ್ತು ಸಂಧ್ಯಾ (2002) ನಂತಹ ಚಲನಚಿತ್ರಗಳಲ್ಲಿನ ಅಭಿನಯಕ್ಕಾಗಿ ಅವರು ಹೆಚ್ಚಿನ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದರು. ಕಲ್ಪನಾ ಲಜ್ಮಿಯ ದಮನ್: ಎ ವಿಕ್ಟಿಮ್ ಆಫ್ ಮ್ಯಾರಿಟಲ್ ವಯಲೆನ್ಸ್ (2001) ಚಿತ್ರದಲ್ಲಿನ ಅಭಿನಯಕ್ಕಾಗಿ ಅವರು ಅತ್ಯುತ್ತಮ ನಟಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದರು. 2012 ರಲ್ಲಿ ಅವರು ಟಿವಿ ಶೋ ಇಸಿ ಕಾ ನಾಮ್ ಜಿಂದಗಿಯಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡರು.
ಟಂಡನ್ 1995 ರಲ್ಲಿ ಪೂಜಾ ಮತ್ತು ಛಾಯಾ ಎಂಬ ಇಬ್ಬರು ಹುಡುಗಿಯರನ್ನು ಒಂಟಿ ತಾಯಿಯಾಗಿ ದತ್ತು ಪಡೆದರು. ಅವರು 22 ಫೆಬ್ರವರಿ 2004 ರಂದು ಚಲನಚಿತ್ರ ವಿತರಕ ಅನಿಲ್ ಥಡಾನಿ ಅವರನ್ನು ವಿವಾಹವಾದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ – ರಾಶಾ ಮತ್ತು ರಣಬೀರ್.
ಬಾಲಿವುಡ್ ಬೆಡಗಿ ರವೀನಾ ಟಂಡನ್ ಸದ್ಯ ಶೂಟಿಂಗ್‌ಗೆ ಬ್ರೇಕ್ ಹಾಕಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಪುತ್ರಿ ರಾಶಾ ಜೊತೆ ರವೀನಾ ಮಹಾರಾಷ್ಟ್ರದ ಗ್ರುಷ್ಣೇಶ್ವರ ಜ್ಯೋತಿರ್ಲಿಂಗ ಮಂದಿರ ಮತ್ತು ಶ್ರೀ ತ್ರಯಂಬಕೇಶ್ವರ ಶಿವ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
ಗ್ರುಷ್ಣೇಶ್ವರ ಜ್ಯೋತಿರ್ಲಿಂಗ ಮಂದಿರ ಮತ್ತು ಶ್ರೀ ತ್ರಯಂಬಕೇಶ್ವರ ಶಿವ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ ರವೀನಾ. ಭೇಟಿ ನೀಡಿರುವ ಸುಂದರ ಫೋಟೋಗಳನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ರವೀನಾ ಪುತ್ರಿ ರಾಶಾ ಬಾಲಿವುಡ್‌ಗೆ ಪಾದಾರ್ಪಣೆ ಮಾಡೋಕೆ ಸಕಲ ತಯಾರಿ ನಡೆಯುತ್ತಿದೆ. ಒಂದಷ್ಟು ಸಿನಿಮಾ ಕಥೆಗಳ ಮಾತುಕತೆ ಕೂಡ ಆಗಿದೆ. ಸದ್ಯದಲ್ಲೇ ಅಧಿಕೃತ ಮಾಹಿತಿ ಹೋರಬೀಳಲಿದೆ.
ಅಂದಹಾಗೆ, ರವೀನಾ ಟಂಡನ್ ನಟನೆಯ ‘ಪಾಟ್ನಾ ಶುಕ್ಲಾ’ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಕೆಜಿಎಫ್- 2 ಸೇರಿದಂತೆ ಹಲವು ಸಿನಿಮಾಗಳು ಅವರ ಕೈಯಲ್ಲಿವೆ.