ಚಿತ್ರದುರ್ಗ ಜಿಲ್ಲೆಯಲ್ಲಿ ದಿನಾಂಕ -01-03-2024 ರಿಂದ 22.03.2024 ರವರೆಗೆ ನಡೆದ ಪರೀಕ್ಷೆಯಲ್ಲಿ ಚಿತ್ರದುರ್ಗ ಜಿಲ್ಲೆ ರಾಜ್ಯದಲ್ಲಿ 31 ನೇ ಸ್ಥಾನವನ್ನು ಹೊಂದಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 13, 348 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 973 ವಿದ್ಯಾರ್ಥಿಗಳು ಉತ್ತರಗೊಂಡಿದ್ದು ಜಿಲ್ಲೆಯಲ್ಲಿ ಶೇಕಡ 72.92 ಫಲಿತಾಂಶ ಪ್ರಕಟವಾಗಿದೆ.
ಕಲಾ ವಿಭಾಗದಲ್ಲಿ : 3990 ವಿದ್ಯಾರ್ಥಿಗಳ ಪರೀಕ್ಷೆಯನ್ನು ಬರೆದಿದ್ದು, ಈ ಪರೀಕ್ಷೆ 2036 ವಿದ್ಯಾರ್ಥಿಗಳು ಉತ್ತರಿಸಿದ್ದಾರೆ. ಮತ್ತು 21 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಸೇರಿದ್ದು, ಚಳ್ಳಕೆರೆ ತಾಲೂಕು ನಾರಾಯಣಪುರ ಗ್ರಾಮದ ಎಸ್.ಎಲ್.ಹೆಚ್.ಆರ್ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಅರ್ಚಿತ.ಜಿ 600 ಅಂಕಗಳಿಗೆ 582 ಅಂಕಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಮೊಳಕಾಲ್ಮೂರು ತಾಲೂಕಿನ ಚಿಕ್ಕೋಬನಹಳ್ಳಿ ಗ್ರಾಮದ ಶ್ರೀ ಆಂಜನೇಯ ಪಿಯು ಕಾಲೇಜನಿ ಅಲ್ಫಿಯಾ ಬಾನು.ಐ 579 ಹಾಗೂ ಹೊಸದುರ್ಗ ನಗರದ ಎಸ್.ಜೆ.ಎಂ ಸ್ವತಂತ್ರ ಪಿಯು ಕಾಲೇಜಿನ ವಿದ್ಯಾರ್ಥಿ ಶರತ್ ಕುಮಾರ್ 573 ಅಂಕಗಳಿಸಿ ಅನುಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ : 3437 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 2580 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದು 21 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದಾರೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಗರದ ಶ್ರೀ ವಾಸವಿ ಪಿಯು ಕಾಲೇಜಿನ ವಿದ್ಯಾರ್ಥಿ ಸೈಯದ್ ಫಯಾಜ್.ಕೆ 600ಕ್ಕೆ 593 ಅಂಕ ಗಳಿಸಿ ಪ್ರಥಮ ಸ್ಥಾನ ಗಳಿಸಿದ್ದಾರೆ.ಚಿತ್ರದುರ್ಗ ಸಮೀಪದ ಸಿಬಾರದ ಗುತ್ತಿನಾಡು ನಿಲಯದ, ವಿಶ್ವ ಮಾನವ ಸಂಯುಕ್ತ ಪದವಿ ಪೂರ್ವ ವಿದ್ಯಾರ್ಥಿನಿಮ್ಯಾ.ಡಿ.ಎಸ್ 584 ಹಾಗೂ ಹಿರಿಯೂರು ತಾಲೂಕಿನ ನಂದಿಹಳ್ಳಿ ಆದಿವಾಳ ಗ್ರಾಮದ ಏನಸಿಯನಟ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಜನ್ಮುನ್ನಿಸ್ಸಾ. ಡಿ 583 ಅಂಕಗಳಿಸಿ ಅನುಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ.
ವಿಜ್ಞಾನ ವಿಭಾಗ : 5921 ವಿದ್ಯಾರ್ಥಿಗಳ ಪರೀಕ್ಷೆ ಬರೆದಿದ್ದು, 4848 ವಿದ್ಯಾರ್ಥಿಗಳು ಉತ್ತರ ಪಡೆದಿದ್ದಾರೆ. 25 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಇದ್ದಾರೆ. ಚಿತ್ರದುರ್ಗ ನಗರದ ಶ್ರೀರಂಗನಾಥ ಪಿಯು ಕಾಲೇಜಿನ ವಿದ್ಯಾರ್ಥಿನಿ ಐಶ್ವರ್ಯ.ಜಿ.ಟಿ 600 ಅಂಕಗಳಿಗೆ 587 ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ನಗರದ ಎಸ್ ಆರ್ ಎಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ನೇಹ.ಎಸ್ 586 ಹಾಗೂ ಚಿನ್ಮೂಲಾದ್ರಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಹುಸೇನ್ ಗರಿ ದಾಫಿಯಾ 585 ಅಂಕ ಗಳಿಸಿ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ. ರ್ಯಾಂಕ್ ಪಡೆದ ವಿದ್ಯಾರ್ಥಿಗಳಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.
ಉಪ ನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ (ಪದವಿ) ಚಿತ್ರದುರ್ಗ ಜಿಲ್ಲೆ ಪಿಯುಸಿ ಫಲಿತಾಂಶ ಪ್ರಕಟವಾಗಿದೆ, ಚಿತ್ರದುರ್ಗ ಜಿಲ್ಲೆಯ ಪೂರ್ವ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ. ಇವರು ಆವಿಷ್ಕಾರ್ ನ್ಯೂಸ್‌ನೊಂದಿಗೆ ಮಾತನಾಡಿ ದ್ವಿತೀಯ ಪಿಯುಸಿ ಫಲಿತಾಂಶದ ಬಗ್ಗೆ ಪ್ರಕಟಿಸಿದರು.