Breaking
Wed. Dec 25th, 2024

85 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ವಿಶೇಷಚೇತನ ಮತದಾರರು ಏ. 13 ರಿಂದ 16 ರವರೆಗೆ ಮನೆಯಿಂದ ಮತದಾನ ಮಾಡಲು ಅವಕಾಶ..!

ಚಿತ್ರದುರ್ಗ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಏ. 13 ರಿಂದ 16 ರವರೆಗೆ, 85 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ವಿಶೇಷಚೇತನ ಮತದಾರರು ಮನೆಯಿಂದ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.

ಚಿತ್ರದುರ್ಗ, ಮೊಳಕಾಲ್ಮೂರು, ಶಿರಾ ವಿಧಾನಸಭಾ ಕ್ಷೇತ್ರ ವ್ಯಾಪ್ರಿಯಲ್ಲಿ ಏಪ್ರಿಲ್ 13 ರಿಂದ 15ರ ವರೆಗೆ, ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ರಿಯಲ್ಲಿ ಏಪ್ರಿಲ್ 13 ರಿಂದ 14ರ ವರೆಗೆ, ಚೆಳ್ಳಕೆರೆ ಹಾಗೂ ಪಾವಗಡ ವಿಧಾನಸಭಾ ಕ್ಷೇತ್ರ ವ್ಯಾಪ್ರಿಯಲ್ಲಿ ಏಪ್ರಿಲ್ 13 ರಿಂದ 16ರ ವರೆಗೆ, ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಮನೆಯಿಂದ ಮತದಾನ ಕಾರ್ಯ ನಡೆಯಲಿದೆ.

ಈಗಾಗಲೇ ವಿಧಾನ ಸಭಾ ಕ್ಷೇತ್ರವಾರು ಸಹಾಯಕ ಚುನಾವಣಾಧಿಕಾರಿಗಳು 85 ವರ್ಷ ಮೇಲ್ಪಪ್ಟವರಿಗೆ ಹಾಗೂ ವಿಶೇಷ ಚೇತನರಿಗೆ ಫಾರಂ 12 ಡಿ ವಿತರಿಸಿ ಮನೆಯಿಂದ ಮತದಾನ ಮಾಡುವವರ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಇದನ್ನು ಆಧರಿಸಿ ಮನೆಯಿಂದ ಮತದಾನ ಮಾಡುವುದಕ್ಕೆ ರೂಟ್ ಮ್ಯಾಪ್ ತಯಾರಿಸಲಾಗಿದೆ. ಇದರ ಅನ್ವಯ ಮನೆಯಿಂದ ಮತದಾನ ಕಾರ್ಯ ನಡೆಯಲಿದೆ ಎಂದು ಚುನವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Post

Leave a Reply

Your email address will not be published. Required fields are marked *