ಬೆಂಗಳೂರು : ಕರ್ನಾಟಕದಲ್ಲಿ ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಈ ಫಲಿತಾಂಶದಲ್ಲಿ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಬಾರಿಯೂ ಸಹ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಶೇ.81.15 ಫಲಿತಾಂಶ ಬಂದಿದೆ. ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ 97.37% ರಾಜ್ಯಕ್ಕೇ ಪ್ರಥಮ ಸ್ಥಾನದಲ್ಲಿದೆ. ಉಡುಪಿ – 96.80% ದ್ವಿತೀಯ, ವಿಜಯಪುರ – 94.89% ತೃತೀಯ ಸ್ಥಾನ ಪಡೆದಿದೆ. ಗದಗ ಜಿಲ್ಲೆ 72.86% ಕೊನೆ ಸ್ಥಾನದಲ್ಲಿದೆ.
ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ 5,52,690 ವಿದ್ಯಾರ್ಥಿಗಳು ಉತ್ತರರಾಗಿದ್ದಾರೆ. ಅವರ ಮೇಲಿನ ಬಾಲಕಿಯರು 3,05,212 (84.87%) ಹಾಗೂ ಬಾಲಕರು 2,47,478 (76.98%) ಮಂದಿ ಪಾಸ್ ಆಗಿದ್ದಾರೆ. ಕಳೆದ ವರ್ಷಕ್ಕಿಂತ 6.48% ಹೆಚ್ಚಿನ ಫಲಿತಾಂಶ ಬಂದಿದೆ.
ವಿದ್ಯಾರ್ಥಿಗಳು ಮತ್ತು ಪೂರಕ ಶಿಕ್ಷಣ ಇಲಾಖೆಯ ವೆಬ್‌ಸೈಟ್ https://karresults.nic.in/ ಭೇಟಿ ನೀಡಿ ಫಲಿತಾಂಶವನ್ನು ವೀಕ್ಷಿಸಬಹುದು.
ಕಳೆದ ಬಾರಿಯಂತೆ ಈ ಬಾರಿ ಕೂಡ ದಕ್ಷಿಣ ಕನ್ನಡ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, ಉಡುಪಿ ಎರಡನೇ ಸ್ಥಾನ ಪಡೆದಿದೆ. ವಿಜಯಪುರ (94.89%) ತೃತೀಯ ಸ್ಥಾನ ಪಡೆದಿದೆ.
ಜಿಲ್ಲಾವಾರು ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ವಿವರ
ಕ್ರ,ಸಂಖ್ಯೆ ಜಿಲ್ಲೆ ಶೇಕಡ
1 ದಕ್ಷಿಣ ಕನ್ನಡ 97.37%
2. ಉಡುಪಿ 96.80%
3 ವಿಜಯಪುರ 94.89%
4 ಉತ್ತರ ಕನ್ನಡ 92.51%
5 ಕೊಡಗು 92.13%
6 ಬೆಂಗಳೂರು ದಕ್ಷಿಣ 89.57%
7 ಬೆಂಗಳೂರು ಉತ್ತರ 88.67%
8 ಶಿವಮೊಗ್ಗ 88.58%
9 ಚಿಕ್ಕಮಗಳೂರು 88.20%
10 ಬೆಂಗಳೂರು ಗ್ರಾಮಾಂತರ 87.55%
11 ಬಾಗಲಕೋಟೆ 87.54%
12 ಕೋಲಾರ 86.12%
13 ಹಾಸನ 85.83%
14 ಚಾಮರಾಜನಗರ 84.99%
15 ಚಿಕ್ಕೋಡಿ 84.10%
16 ರಾಮನಗರ 83.58%
17 ಮೈಸೂರು 83.13%
18 ಚಿಕ್ಕಬಳ್ಳಾಪುರ 82.84%
19 ಬೀದರ್ 81.69%
20 ತುಮಕೂರು 81.03%
21 ದಾವಣಗೆರೆ 80.96%
22 ಕೊಪ್ಪಳ 80.83%
23 ಧಾರವಾಡ 80.70%
24 ಮಂಡ್ಯ 80.56%
25 ಹಾವೇರಿ 78.36%
26 ಯಾದಗಿರಿ 77.29%
27 ಬೆಳಗಾವಿ 77.20%
28 ಕಲಬುರಗಿ 75.48%
29 ಬಳ್ಳಾರಿ 74.70%
30 ರಾಯಚೂರು 73.11%
31 ಚಿತ್ರದುರ್ಗ 72.92%
32 ಗದಗ 72.86%
ವಿಶೇಷ ಸೂಚನೆ : ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ದಕ್ಷಿಣ ಕನ್ನಡ ಜಿಲ್ಲೆಗೆ ಹೃತ್ಪೂರ್ವಕವಾದ ಅಭಿನಂದನೆಗಳು ಹಾಗೂ ರಾಜ್ಯಕ್ಕೆ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾದ ನಂತರ ಮುಂದಿನ ಬಾರಿ ಹೆಚ್ಚಿನ ಸಂಖ್ಯೆಯ ಪರೀಕ್ಷೆಯಲ್ಲಿ ಎಲ್ಲ ಜಿಲ್ಲೆಗಳಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸುವ ಮೂಲಕ ಕರ್ನಾಟಕ ರಾಜ್ಯಕ್ಕೆ ಒಂದು ದೊಡ್ಡ ಮಟ್ಟದ ಫಲಿತಾಂಶವನ್ನು ನೀಡುವಲ್ಲಿ ಯಶಸ್ವಿಯಾಗಲು ಆವಿಷ್ಕಾರ್ ನ್ಯೂಸ್ ಮನವಿ.