ಉಡುಪಿ, ಎಪ್ರಿಲ್ ,11 : ಮಲ್ಪೆ ಭಾಪು ತೋಟ ಅಂಗನವಾಡಿಯಲ್ಲಿ ಶಾಲಾ ಶಿಕ್ಷಕಿ ಇಲ್ಲದೆ ಶಾಲೆಗೆ ಬೀಗ ಹಾಕಿದ ಘಟನೆ ನಡೆದಿದೆ. ಯಾವುದೇ ಸರ್ಕಾರಿ ಸುತ್ತೋಲೆ ಇಲ್ಲದೆ ಅಂಗನವಾಡಿಗೆ ಬೀಗ ಹಾಕಿದ ಶಾಲಾ ಶಿಕ್ಷಕಿ. ಇದರಿಂದ ಶಾಲಾ ಮಕ್ಕಳಿಗೆ ಇಂದಿನ ಉಪಹಾರವೇ ಇಲ್ಲದಂತಾಗಿದೆ.
ಈ ಅಂಗನವಾಡಿಗೆ ಹೇಳರು ಕೇಳೋರು ಯಾರು ಇಲ್ವಾ? ಅಧಿಕಾರಿಗಳೇ ನೀವೇನು ಮಾಡುತ್ತಿದ್ದೀರಾ..? ಉಡುಪಿಯ ಅಂಗನವಾಡಿಗಳಲ್ಲಿ ಇಂಥದ್ದೇ ನಡೆಯುತ್ತಿದೆ.
ಶಾಲೆಗಳು ತೆರೆದಿದ್ದರು ಅಂಗನವಾಡಿ ಟೀಚರ್ ಗಳೇ ಇರಲ್ಲ. ಇದರಿಂದ ಮಕ್ಕಳು ಪಾಠದಿಂದ ವಂಚಿತರಾಗುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಕೊಳ್ಳಬೇಕಾಗಿ ಸಾರ್ವಜನಿಕರು ಮನವಿ ಮಾಡಿದ್ದಾರೆ.