ಉಡುಪಿ, ಏ.11 : ತಾಲೂಕಿನ ಸಂತಕಟ್ಟೆ ಬಳಿ ಟೈಮಿಂಗ್ ವಿಚಾರದಲ್ಲಿ ಖಾಸಗಿ ಬಸ್ ಕಂಡಕ್ಟರ್ಗಳ ನಡುವೆ ಮಾರಾಮಾರಿ ನಡೆದಿದೆ. ಕಂಡಕ್ಟರ್ಗಳ ಹೊಡೆದಾಟದ ದೃಶ್ಯ ಬಸ್ಸಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತನಗಿಂತ ಬೇಗ ಬಂದು ಬಸ್ಸು ನಿಲ್ಲಿಸಿದ್ದಕ್ಕೆ ಲೇಡಿ ಕಂಡಕ್ಟರ್ ರೇಖಾ ಎಂಬುವವರು ಮತ್ತೋರ್ವ ಖಾಸಗಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ್ದಾರೆ. ಮಹಿಳಾ ಕಂಡಕ್ಟರ್ ರೌದ್ರಾವತಾರ ಕಂಡು ಪ್ರಯಾಣಿಕರು ತಬ್ಬಿಬ್ಬಾಗಿದ್ದಾರೆ.