ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್ ವಿಚಾರ ಮತ್ತೊಂದು ಸ್ವರೂಪದಲ್ಲಿದೆ. ಗಜಪಡೆ ಸೋಷಿಯಲ್ ಮೀಡಿಯಾ ಖಾತೆಯಿಂದ ಅಶ್ವಿನಿ ಅವರಿಗೆ ಅವಹೇಳನ ಮಾಡಲಾಗಿದೆ. ಈ ಕೃತ್ಯವನ್ನು ದರ್ಶನ್ ಅಭಿಮಾನಿಗಳು ಮಾಡಿದ್ದಾರೆ ಎಂದು ಆರೋಪಿಸಲಾಯಿತು.
ಈ ಕೃತ್ಯಕ್ಕೆ ಅಪ್ಪು ಅಭಿಮಾನಿಗಳು ನಾಲ್ಕು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದುರುಳರ ಹೆಡೆಮೂರಿ ಕಟ್ಟುವಂತೆ ಗೃಹ ಸಚಿವರಿಗೂ ವಿನಂತಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರೇ ಈ ಪ್ರಕರಣವನ್ನು ಗಂಭೀರವಾಗಿ ತಗೆದುಕೊಂಡಿದ್ದಾರೆ. ಇಲ್ಲಿಗೆ ಏನೋ ಒಂದು ತಾರ್ಕಿಕ ಅಂತ್ಯ ಸಿಗಬಹುದು ಎನ್ನುತ್ತಿರುವಾಗಲೇ ಧ್ರುವ ಸರ್ಜಾ ಅಭಿಮಾನಿಗಳು ಈ ಘಟನೆಯಲ್ಲಿ ಎಳೆತರುತ್ತಿದ್ದಾರೆ.
ಈ ಪ್ರಕರಣದಲ್ಲಿ ಧ್ರುವ ಸರ್ಜಾ ಅವರ ಅಭಿಮಾನಿಗಳಿಗೆ ಎಳೆತಂದಿದ್ದಕ್ಕೆ ಧ್ರುವ ಸರ್ಜಾ ಅಭಿಮಾನಿಗಳು ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ದರ್ಶನ್ ಅಭಿಮಾನಿಗಳ ಸಾಮಾಜಿಕ ಜಾಲತಾಣದ ಜಗಳಕ್ಕೆ ಧ್ರುವ ಸರ್ಜಾ ಹಾಗೂ ಅವರ ಅಭಿಮಾನಿಗಳು ಎಳೆತಂದಿರುವುದನ್ನು ಖಂಡಿಸಿದ್ದಾರೆ.
ಧ್ರುವ ಸರ್ಜಾ ಅಭಿಮಾನಿಗಳ ಹೆಸರಿಗೆ ಮಸಿ ಬಳಿಯಲು ದರ್ಶನ್ ಫ್ಯಾನ್ಸ್ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪ ಕೂಡ ಮಾಡಿದ್ದಾರೆ. ಕಿಡಿಗೇಡಿ ಯಾರೆಂದು ಪತ್ತೆ ಮಾಡ್ಬೇಕು. ನಮ್ಮ ಮೇಲೆ ಬೆರಳು ತೋರಿಸುವ ಪ್ರಯತ್ನ ನಡೆಯುತ್ತಿದೆ . ಈ ವಿಚಾರಕ್ಕೆ ಶೀಘ್ರ ತನಿಖೆಗೆ ಸಾಕ್ಷಿಯಾಗಿದೆ ಧ್ರುವ ಅಭಿಮಾನಿಗಳು.