ಪ್ಯೊಂಗ್ಯಾಂಗ್ : ಉತ್ತರ ಕೊರಿಯಾದಲ್ಲಿ ಮತ್ತೆ ಯುದ್ಧದ ಭೀತಿ ಎದುರಾಗಿದೆ. ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ರಾಷ್ಟ್ರಗಳು ಕೊರಾನಾ ಭೀತಿಯಿಂದ ತುಂಬಾ ನೋವು ಅನುಭವಿಸುತ್ತಾ ಬಂದಿರುವ ನಿಟ್ಟಿನಲ್ಲಿ ಈಗ ಉತ್ತರ ಕೊರಿಯಾದಲ್ಲಿ ಯುದ್ಧದ ಭೀತಿ ಶುರುವಾಗಿದೆ. ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ನಿರ್ಧಾರಗಳು ಮತ್ತು ವಿಚಿತ್ರ ಹೇಳಿಕೆಗಳಿಗಾಗಿ ಜಗತ್ತಿಗೆ ತಿಳಿದಿದೆ. ಇದೀಗ ಹೇಳಿಕೆಯೊಂದನ್ನು ನೀಡುವ ಮೂಲಕ ಕಿಮ್ ಮತ್ತೆ ಸುದ್ದಿಯಲ್ಲಿದ್ದಾರೆ.
ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ತನ್ನ ನೆರೆಯ ದಕ್ಷಿಣ ಕೊರಿಯಾವನ್ನು ತನ್ನ ದೊಡ್ಡ ಶತ್ರು ಎಂದು ಪರಿಗಣಿಸುತ್ತಾರೆ. ಹೀಗಾಗಿ ದಕ್ಷಿಣ ಕೊರಿಯಾವನ್ನು ಎದುರಿಸಲು ಕಿಮ್, ತನ್ನ ಶಸ್ತ್ರಾಸ್ತ್ರಗಳನ್ನು ಹೆಚ್ಚಿಸುತ್ತಿದ್ದಾರೆ.
ಮಾಧ್ಯಮ ವರದಿ ಪ್ರಕಾರ, ಕಿಮ್ ಜಾಂಗ್ ಉನ್ ಅವರು ದೇಶದ ಪ್ರಮುಖ ಮಿಲಿಟರಿ ವಿಶ್ವವಿದ್ಯಾಲಯವನ್ನು ಪರಿಶೀಲಿಸಲು ಬುಧವಾರ ಆಗಮಿಸಿದರು. ಈ ಸಂದರ್ಭದಲ್ಲಿ ದೇಶಾದ್ಯಂತ ಎಲ್ಲವೂ ಸರಿಯಾಗಿಲ್ಲ. ಇದರರ್ಥ ನಾವು ಈಗ ಹಿಂದೆಂದಿಗಿಂತಲೂ ಹೆಚ್ಚು ಯುದ್ಧಕ್ಕೆ ಸಿದ್ಧರಾಗಿರಬೇಕು ಎಂದು ಹೇಳಿದ್ದಾರೆ
ತಮ್ಮ ದೇಶದ ಸುತ್ತಮುತ್ತಲಿನ ಅಸ್ಥಿರ ಭೌಗೋಳಿಕ ರಾಜಕೀಯ ಪರಿಸ್ಥಿತಿಗಳನ್ನು ನೋಡಿದಾಗ ಯುದ್ಧದ ಸಮಯಕ್ಕೆ ಸಿದ್ಧರಾಗುವಂತಿದೆ ಎಂದು ತಿಳಿಸಿದ್ದಾರೆ.