Breaking
Sun. Dec 29th, 2024

ಹಿಂದಿ ಚಿತ್ರರಂಗದ ಸೆಲೆಬ್ರಿಟಿಗಳ ಲವ್ ಮತ್ತು ಮದುವೆಯ ಹಿಂದಿರುವ ಕರಾಳ ಸತ್ಯ ಬೆಚ್ಚಿಟ್ಟ ನೋರಾ ಫತೇಹಿ…!

ನಟಿ, ಡ್ಯಾನ್ಸರ್ ನೋರಾ ಫತೇಹಿ ಅವರು ಬಾಲಿವುಡ್‌ನಲ್ಲಿ ಛಾಪು ಮೂಡಿಸಿದ್ದಾರೆ. ಕೆನಡಾದಿಂದ ಬಂದ ಅವರು ಭಾರತದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಸದ್ಯಕ್ಕಂತೂ ನೋರಾ ಫತೇಹಿ ಸಿಂಗಲ್ ಆಗಿದ್ದಾರೆ. ಆದರೂ ಕೂಡ ಅವರು ಬಾಲಿವುಡ್ ಮಂದಿಯ ಲವ್, ರಿಲೇಷನ್ಶಿಪ್, ಮದುವೆ ಬಗ್ಗೆ ಮಾತನಾಡಿದ್ದಾರೆ. ರಣವೀರ್ ಅಲಹಬಾದಿಯಾ ಅವರ ಪಾಡ್ಕಾಸ್ಟ್ಗೆ ನೀಡಿದ ಸಂದರ್ಶನದಲ್ಲಿ ನೋರಾ ಫತೇಹಿ ಅವರು ಅನೇಕ ವಿಚಾರಗಳನ್ನು ಬಾಯಿ ಬಿಟ್ಟಿದ್ದಾರೆ. ಹಿಂದಿ ಚಿತ್ರರಂಗದ ಸೆಲೆಬ್ರಿಟಿಗಳ ಲವ್ ಮತ್ತು ಮದುವೆಯ ಹಿಂದಿರುವ ಕರಾಳ ಸತ್ಯವನ್ನು ಅವರು ತೆರೆದಿಟ್ಟಿದ್ದಾರೆ. 

ಅವರೆಲ್ಲ ಲಾಭಕ್ಕಾಗಿ ಇರುವವರು. ನಿಮ್ಮ ಹೆಸರನ್ನು ಬಳಸಿಕೊಳ್ಳಲು ನೋಡುತ್ತಾರೆ. ಅಂಥವರು ನನ್ನ ಜೊತೆ ಇರಲು ಸಾಧ್ಯವಿಲ್ಲ. ನಾನು ಯಾವ ಹುಡುಗನ ಹಿಂದೆ ಹೋಗಿಲ್ಲ. ಡೇಟಿಂಗ್ ಮಾಡಿಲ್ಲ. ಆದರೆ ನನ್ನ ಎದುರಲ್ಲೇ ಇದೆಲ್ಲ ನಡೆಯುತ್ತಿದೆ. ಚಿತ್ರರಂಗದಲ್ಲಿ ಸೆಲೆಬ್ರಿಟಿಗಳ ಲಾಭಕ್ಕಾಗಿ ಮದುವೆ ಆಗುತ್ತಾರೆ’ ಎಂದು ನೋರಾ ಫತೇಹಿ ಹೇಳಿದ್ದಾರೆ. ಅದು ಹೇಗೆ ಎಂದು ಅವರು ವಿವರಿಸಿದ್ದಾರೆ.

‘ಪ್ರಸಿದ್ಧಿ ಇರುವ ತಮ್ಮ ಹೆಂಡತಿ ಅಥವಾ ಗಂಡನ ಹೆಸರನ್ನು ಈ ಜನರು ಬಳಸಿಕೊಳ್ಳುತ್ತಾರೆ. ಅದರಿಂದ ಚಿತ್ರರಂಗದಲ್ಲಿ ಸಂಪರ್ಕ ಹೆಚ್ಚಿಸಿಕೊಳ್ಳುತ್ತಾರೆ. ಹಣ ಗಳಿಸಲು, ಪ್ರಚಲಿತದಲ್ಲಿ ಇರಲು ಮದುವೆ ಆಗುತ್ತಾರೆ. ಆ ವ್ಯಕ್ತಿಯನ್ನು ಮದುವೆ ಆದರೆ ಮುಂದಿನ 3 ವರ್ಷಗಳ ಕಾಲ ತಾನು ಸುದ್ದಿಯಲ್ಲಿ ಇರಬಹುದು. ಯಾವ ವ್ಯಕ್ತಿಯ ಬಳಿ ಮೂರು ಸಿನಿಮಾಗಳು ಇವೆ. ಅವು ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆಗುತ್ತವೆ. ಆ ಅಲೆಯಲ್ಲಿ ತಾನು ತೇಲಬಹುದು ಎಂಬುದು ಅಂಥವರ ಲೆಕ್ಕಾಚಾರ ಆಗಿರುತ್ತದೆ’ ಎಂದು ನೋರಾ ಫತೇಹಿ ಹೇಳಿದ್ದಾರೆ. 

ಇಂಥವರು ದುಡ್ಡಿಗಾಗಿ ಇದನ್ನೆಲ್ಲ ಮಾಡುತ್ತಾರೆ. ಹಣಕ್ಕಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಇಷ್ಟವೇ ವ್ಯಕ್ತಿಯನ್ನು ಮದುವೆ ಆಗಿ ಜೀವನ ಮಾಡಬೇಕೆಂದರೆ ಕೆಟ್ಟದ್ದು ಬೇರೆ ಯಾವುದೂ ಇಲ್ಲ. ವೈಯಕ್ತಿಕ ಜೀವನ, ಮಾನಸಿಕ ಆರೋಗ್ಯ ಮತ್ತು ಸಂತಸವನ್ನು ತ್ಯಾಗ ಮಾಡುವುದರಲ್ಲಿ ಅರ್ಥವಿಲ್ಲ. ಕೆಲಸ ಮತ್ತು ವೈಯಕ್ತಿಕ ಬದುಕನ್ನು ಮಿಶ್ರಣ ಮಾಡಬಾರದು. ಖಿನ್ನತೆ, ಆತ್ಮಹತ್ಯೆಯ ಆಲೋಚನೆ ಯಾಕೆ ಬರುತ್ತದೆ ಅಂತ ನಿಮಗೆ ಅಚ್ಚರಿಯಾಗುತ್ತದೆ’ ನೋರಾ ಫತೇಹಿ.

Related Post

Leave a Reply

Your email address will not be published. Required fields are marked *