ದುನಿಯಾ ಸೋರಿ ನಿರ್ದೇಶನದ ಕೆಂಡಸಂಪಿಗೆ (2015 )ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ, ಮಾನ್ವಿತಾ ಕಾಮತ್ ಅವರು ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ. ‘ಕೆಂಡಸಂಪಿಗೆ’ ಸಿನಿಮಾ ಬಣ್ಣದ ಬದುಕು ಆರಂಭಿಸಿದ ಮಾನ್ವಿತಾ ಮದುವೆ ಆಗುತ್ತಿದೆ. ಅವರ ಮದುವೆ ಆಮಂತ್ರಣದ ವಿಡಿಯೋ ಇಲ್ಲಿದೆ.
ಮಾನ್ವಿತಾ ಕಾಮತ್ ನಟನೆಯ ಚಿತ್ರಗಳು ಈ ಕೆಳಗಿನಂತಿವೆ ಕೆಂಡಸಂಪಿಗೆ ಚೌಕ, ಕನಕ, ಟಗರು, ತಾರಕಾಸುರ, ವಿಶ್ರಾಂತಿ ಸತ್ಯ, ಇಂಡಿಯಾ ವರ್ಸಸ್ ಇಂಗ್ಲೆಂಡ್, ಶಿವ 143 ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರಿಗೆ ಕೆಂಡಸಂಪಿಗೆ ಚಿತ್ರದಿಂದ ಹೆಚ್ಚಿನ ಬೇಡಿಕೆ ಬಂದಿದ್ದು, ಇವರ ನಟನೆಗೆ ಪ್ರಶಸ್ತಿ ಕೂಡ ಬಂದಿದೆ, ಹಾಗೂ ಟಗರು ಚಿತ್ರದಲ್ಲಿಯೂ ಅತ್ಯುತ್ತಮ ನಟನೆಯವರು ಮಾಡಿದ್ದಾರೆ.
ಮೈಸೂರು ಮೂಲದ ಅರುಣ್ ಕುಮಾರ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸಂಗೀತ ಆಧಾರಿತ ಟೆಕ್ ಕಂಪನಿಯ ಇಂಜಿನಿಯರ್ ಆಗಿ ಅವರು ಕೆಲಸ ನಿರ್ವಹಿಸುತ್ತಿದ್ದಾರೆ.
ಮೇ 1ರಂದು ಮಾನ್ವಿತಾ ಹಾಗೂ ಅರುಣ್ ಕುಮಾರ್ ಮದುವೆ ನಂತರ. ಏಪ್ರಿಲ್ 29ಕ್ಕೆ ಮೆಹಂದಿ ಕಾರ್ಯಕ್ರಮ, ಏಪ್ರಿಲ್ 30 ರಂದು ಅರಿಶಿಣ ಶಾಸ್ತ್ರ. ಏಪ್ರಿಲ್ 30 ರಂದು ಸಂಗೀತ ಕಾರ್ಯಕ್ರಮ. ಚಿಕ್ಕಮಗಳೂರಿನ ಕಳಸದ ಮದುವೆ ನಂತರ.