ತೆಲುಗಿನ ಹೆಸರಾಂತ ನಟಿ ಶೋಭಿತಾ ಧುಲಿಪಾಲ ಹಾಲಿವುಡ್ ನ ಮಂಕಿ ಮ್ಯಾನ್ ಸಿನಿಮಾದಲ್ಲಿ ನಟಿಸಿದ್ದಾರೆ. ಹಾಲಿವುಡ್ ನ ಈ ಸಿನಿಮಾ ಈಗಾಗಲೇ ಬೇರೆ ಬೇರೆ ದೇಶಗಳಲ್ಲಿ ಬಿಡುಗಡೆ ಆಗಿದೆ. ಭಾರತದಲ್ಲಿ ಇದೇ 26ರಂದು ರಿಲೀಸ್ ಆಗುತ್ತಿದ್ದು, ಸಿನಿಮಾದಲ್ಲಿ ಶೋಭಿತಾ ವೇಶ್ಯೆಯ ಪಾತ್ರ ಮಾಡಿದ್ದಾರೆ. ಈ ಪಾತ್ರ ಮಾಡಿದ್ದಕ್ಕೆ ಹೆಮ್ಮೆ ಇದೆ ಎಂದು ಅವರು ಹೇಳಿಕೊಂಡಿದ್ದಾರೆ.ಶೋಭಿತಾ ಅಂದಾಕ್ಷಣ ಸಿನಿಮಾಗಳ ಜೊತೆ ಜೊತೆಗೆ ವಿವಾದಗಳು ನೆನಪಾಗುತ್ತವೆ. ಸದ್ಯ ಶೋಭಿತಾ ಧುಲಿಪಾಲ ಜೊತೆ ನಾಗ ಚೈತನ್ಯ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವದಂತಿ ಹಬ್ಬಿದೆ. ಈ ವಿಚಾರದಲ್ಲಿ ಅನಗತ್ಯವಾಗಿ ಸಮಂತಾ ಅವರನ್ನು ಚೈ ಫ್ಯಾನ್ಸ್ ಎಳೆದು ತಂದಿದ್ದರು. ಇವರೆಲ್ಲರಿಗೂ ಸಮಂತಾ ಖಡಕ್ ಉತ್ತರ ನೀಡಿದ್ದರು.
ಕಳೆದ ವರ್ಷ ಸಮಂತಾ ಮತ್ತು ನಾಗ ಚೈತನ್ಯ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದರು. ಇಬ್ಬರೂ ತಮ್ಮದೇ ಕೆಲಸಗಳಲ್ಲಿ ಬ್ಯುಸಿಯಿದ್ದಾರೆ. ಎಲ್ಲವನ್ನು ಮರೆತು ಹೊಸ ಜೀವನ ನಡೆಸುತ್ತಿದ್ದಾರೆ. ಹೀಗಿರುವಾಗ ಕೆಲವರು ಇವರ ಗಾಯದ ಮೇಲೆ ಮತ್ತೆ ಬರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಅದಕ್ಕೆ ಸಮಂತಾ ತಕ್ಕ ಉತ್ತರ ನೀಡಿದ್ದಾರೆ.
ಸಮಂತಾ ಜತೆಗಿನ ವಿಚ್ಛೇದನ ನಂತರ ನಾಗಚೈತನ್ಯ ನಟಿ ಶೋಭಿತಾ ಧುಲಿಪಾಲ ಜತೆ ಪ್ರೀತಿಯಲ್ಲಿದ್ದಾರಂತೆ. ಸಾಕಷ್ಟು ದಿನಗಳಿಂದ ನಾಗ ಚೈತನ್ಯ ಶೋಭಿತಾ ಜತೆ ಡೇಟಿಂಗ್‌ನಲ್ಲಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಈ ವಿಷ್ಯಕ್ಕೆ ಸಮಂತಾ ಅವರನ್ನು ಎಳೆದಿದ್ದಾರೆ. ಅದಕ್ಕೆ ಸಮಂತಾ ಟ್ವೀಟ್ ಮೂಲಕ ಖಡಕ್ ರಿಯಾಕ್ಷನ್ ಕೊಟ್ಟಿದ್ದಾರೆ.
ಹೆಣ್ಣು ಮಕ್ಕಳ ಬಗ್ಗೆ ವದಂತಿ ಹಬ್ಬಿದರೆ ಅದು ನಿಜ ಎನ್ನುತ್ತೀರಿ. ಗಂಡು ಮಕ್ಕಳ ಬಗ್ಗೆ ವದಂತಿ ಹಬ್ಬಿದರೆ ಇದು ಹೆಣ್ಣಿನ ಕೆಲಸ ಎನ್ನುತ್ತೀರಿ. ಇದರಲ್ಲಿ ಭಾಗಿಯಾದವರೇ ಎಲ್ಲವನ್ನು ಬಿಟ್ಟು ಮುಂದೆ ಸಾಗಿದ್ದಾರೆ. ನೀವೂ ಇದನ್ನು ಬಿಟ್ಟು ಮುಂದೆ ಸಾಗಿ. ನಿಮ್ಮ ಕೆಲಸ ನೋಡಿಕೊಳ್ಳಿ, ನಿಮ್ಮ ಕುಟುಂಬದ ಕಡೆ ಗಮನ ನೀಡಿ ಅಂತಾ ಕೆಣಕಿದವರಿಗೆ ಸಮಂತಾ ತಿರುಗೇಟು ನೀಡಿದ್ದಾರೆ.