Breaking
Tue. Dec 24th, 2024

ಪ್ರೀತಿ ವಿಚಾರದಲ್ಲಿ ನಾನು ಮೋಸ ಹೋಗಿದ್ದೆ ಬಾಲಿವುಡ್ ನಟಿ ಯಾರು ಗೊತ್ತಾ…!

ನಟಿ ವಿದ್ಯಾ ಬಾಲನ್  ಅವರು ಮೊದಲಿನ ವೇಗದಲ್ಲಿ ಸಿನಿಮಾ ಮಾಡುತ್ತಿಲ್ಲ. ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಂಡು ಅವರು ನಟಿಸುತ್ತಿದ್ದಾರೆ. ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಮದುವೆ ಆದ ಬಳಿಕ ಯಾರೂ ತಮ್ಮ ಹಳೆಯ ಸಂಬಂಧದ ಬಗ್ಗೆ ಹೇಳಿಕೊಳ್ಳಲು ಇಷ್ಟಪಡುವುದಿಲ್ಲ.

ಆದರೆ, ವಿದ್ಯಾ ಬಾಲನ್ ಹಾಗಲ್ಲ. ಅವರು ಮೊದಲ ಬಾಯ್ಫ್ರೆಂಡ್ ಮಾಡಿದ ಮೋಸದ ಬಗ್ಗೆ ಹೇಳಿಕೊಂಡಿದ್ದಾರೆ. ಆತನಿಂದ ನನಗೆ ಮೋಸ ಆಗಿತ್ತು ಎಂದಿದ್ದಾರೆ ವಿದ್ಯಾ. ಜೊತೆಗೆ ಬಾಲಿವುಡ್ನ ಕರಾಳ ಸತ್ಯದ ಬಗ್ಗೆಯೂ ಬಾಯ್ಬಿಟ್ಟಿದ್ದಾರೆ. ‌

ನಾನು ಪ್ರೀತಿ ವಿಚಾರದಲ್ಲಿ ನಾನು ಮೋಸ ಹೋಗಿದ್ದೆ. ನಾನು ಡೇಟ್ ಮಾಡಿದ ಮೊದಲ ಹುಡುಗ ನನಗೆ ಮೋಸ ಮಾಡಿದ್ದ. ನಮ್ಮ ಮಧ್ಯೆ ಆಗಷ್ಟೇ ಬ್ರೇಕಪ್ ಆಗಿತ್ತು. ಪ್ರೇಮಿಗಳ ದಿನದಂದು ನಾನು ಕಾಲೇಜಿನಲ್ಲಿ ಅವನೊಂದಿಗೆ ಜಗಳ ಮಾಡಿದ್ದೆ. ಆಗ ಅವನು ನನ್ನತ್ತ ತಿರುಗಿ ‘ನಾನು ನನ್ನ ಮಾಜಿ ಗೆಳತಿಯನ್ನು ಭೇಟಿಯಾಗಲು ಹೋಗುತ್ತಿದ್ದೇನೆ’ ಎಂದು ಹೇಳಿದ್ದ. ಆ ದಿನ ಅವನು ಅಕ್ಷರಶಃ ನನ್ನ ಮನಸ್ಸನ್ನು ಮುರಿದ. ನಂತರ ನನ್ನ ಜೀವನವನ್ನು ನಾನು ಸುಧಾರಿಸಿಕೊಂಡೆ’ ಎಂದಿದ್ದಾರೆ ಅವರು.

ಕೆಲ ಹೀರೋಗಳಿಗೆ ವಿದ್ಯಾ ಬಾಲನ್ ಜೊತೆ ನಟಿಸೋದು ಅಷ್ಟು ಆರಾಮದಾಯಕ ಅಲ್ಲ ಎನಿಸುತ್ತಿತ್ತಂತೆ. ಅವರು ಯಶಸ್ವಿ ಸಿನಿಮಾಗಳನ್ನು ನೀಡಿದರೂ ಅವರ ಜೊತೆ ತೆರೆಹಂಚಿಕೊಳ್ಳೋಕೆ ಬಂದಾಗ ಕೆಲ ಸ್ಟಾರ್ ಹೀರೋಗಳು ಹಿಂಜರಿಕೆ ತೋರಿದ್ದು ಅವರ ಗಮನಕ್ಕೆ ಬಂದಿದೆ. ಈ ಬಗ್ಗೆ ಅವರು ಮಾತನಾಡಿದ್ದಾರೆ. 

ನನ್ನ ಸಿನಿಮಾಗಳಲ್ಲಿ ಅಥವಾ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸಲು ಅವರಿಗೆ ಯಾವುದೇ ಹಿಂಜರಿಕೆ ಇಲ್ಲ ಎಂದು ನಾನು ಈಗಲೂ ಭಾವಿಸುವುದಿಲ್ಲ. ನಾವು ಅವರಿಗಿಂತ ಉತ್ತಮ ಸಿನಿಮಾಗಳನ್ನು ಮಾಡುತ್ತಿದ್ದೇನೆ. ಇದು ಅವರಿಗೇ ಆದ ನಷ್ಟ. ಅವರು ಒಂದು ಫಾರ್ಮುಲಾ ಹಿಡಿದುಕೊಂಡು ಸಿನಿಮಾ ಮಾಡುತ್ತಿದ್ದಾರೆ.

ಆದರೆ, ಮಹಿಳಾ ಪ್ರಧಾನ ಸಿನಿಮಾಗಳು ಹೆಚ್ಚು ರೋಮಾಂಚನಕಾರಿಯಾಗಿ ಇರುತ್ತವೆ. ಜನರು ಶ್ಲಾಘಿಸಿಲ್ಲ ಎಂದು ನಾನು ಹೇಳುತ್ತಿಲ್ಲ, ಆದರೆ ಮಹಿಳೆಯರು ಹೆಚ್ಚು ಹೈಲೈಟ್ ಆಗುತ್ತಿರುವುದು ಹೀರೋಗಳಿಗೆ ಖುಷಿ ಇಲ್ಲ’ ಎಂದಿದ್ದಾರೆ ಅವರು. ಇತ್ತೀಚೆಗೆ ವಿದ್ಯಾ ಬಾಲನ್ ಅವರು ಮಹಿಳಾ ಪ್ರಧಾನ ಸಿನಿಮಾಗಳಲ್ಲೇ ಹೆಚ್ಚು ನಟಿಸಿದ್ದಾರೆ. 

ವಿದ್ಯಾ ಬಾಲನ್ ಅವರು ಸದ್ಯ ‘ದೊ ಔರ್ ದೋ ಪ್ಯಾರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಪ್ರತೀಕ್ ಗಾಂಧಿ ಹೀರೋ. ಇಲಿಯಾನಾ ಡಿಕ್ರೂಜ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾ.

Related Post

Leave a Reply

Your email address will not be published. Required fields are marked *