ನಿರ್ಮಾಪಕ ಸೌಂದರ್ಯ ಜಗದೀಶ್ ತಮ್ಮ ನಿವಾಸದಲ್ಲಿ ಆತ್ಯಹತ್ಯೆ ಮಾಡಿಕೊಂಡಿದ್ದಾರೆ. ಈಲ್ಲೇ ಸ್ಯಾಂಡಲ್ವುಡ್ ಗಣ್ಯರು ಜಗದೀಶ್ ಅವರ ನಿವಾಸಕ್ಕೆ ಭೇಟಿ ನೀಡುತ್ತಿದ್ದಾರೆ.
ಇದೀಗ ಕೈನೋವಿನ ಸಂದರ್ಭದಲ್ಲಿಯೂ ನಟ ದರ್ಶನ್ ಆಪ್ತ ಸ್ನೇಹಿತ ಸೌಂದರ್ಯ ಜಗದೀಶ್ ಅಂತಿಮ ದರ್ಶನ ಪಡೆದಿದ್ದಾರೆ. ಸೌಂದರ್ಯ ಜಗದೀಶ್ ಇದೀಗ ಕುಟುಂಬಸ್ಥರಿಗೆ, ಆಪ್ತರಿಗೆ ಶಾಕ್ ಕೊಟ್ಟಿದ್ದಾರೆ. ಜಗದೀಶ್‌ಗೆ ಅಂತಿಮ ನಮನ ಸಲ್ಲಿಸಲು ಗಣ್ಯರು ಮನೆಗೆ ಭೇಟಿ ನೀಡುತ್ತಿದ್ದಾರೆ. ಹೀಗಿರುವಾಗ ಹಲವು ವರ್ಷಗಳ ಸ್ನೇಹಿತರಾದ ಜಗದೀಶ್‌ಗೆ ಅಂತಿಮ ದರ್ಶನ ಪಡೆಯಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗಮಿಸಿದ್ದಾರೆ.
‘ಡೆವಿಲ್’ ಶೂಟಿಂಗ್‌ನಲ್ಲಿ ಕೈಗೆ ಏಟು ಮಾಡಿಕೊಂಡಿದ್ದರ ಹಿನ್ನಲೆಯಲ್ಲಿ ಇತ್ತೀಚೆಗೆ ದರ್ಶನ್ ಎಡಗೈಗೆ ಸರ್ಜರಿ ಆಗಿದೆ. ಒಂದು ತಿಂಗಳ ಕಾಲ ವಿಶ್ರಾಂತಿ ಅಗತ್ಯ ಎಂದು ವೈದ್ಯರು ಹೇಳಿದ್ದಾರೆ. ಕೈನೋವಿನ ಸಂದರ್ಭದಲ್ಲೂ ಜಗದೀಶ್ ಅಂತಿಮ ದರ್ಶನಕ್ಕೆ ದರ್ಶನ್ ಆಗಮಿಸಿ ಕುಟುಂಬದವರಿಗೆ ಸಂತೈಸಿದ್ದಾರೆ. ಈ ವೇಳೆ, ದರ್ಶನ್ ಜೊತೆ ನಟ ಧನ್ವೀರ್ ಗೌಡ ಮತ್ತು ಯಶಸ್ ಸೂರ್ಯ ಆಗಮನಿಸಿದ್ದರು.
ನಿರ್ಮಾಪಕ ಸೌಂದರ್ಯ ಜಗದೀಶ್‌ಗೆ ಅಂತಿಮ ದರ್ಶನ ಪಡೆಯಲು ಉಪೇಂದ್ರ ದಂಪತಿ, ನಟಿ ಅಮೂಲ್ಯ, ಶ್ರೀನಗರ ಕಿ, ವಿನೋದ್ ಪ್ರಭಾಕರ್, ಲವ್ಲಿ ಸ್ಟಾರ್ ಪ್ರೇಮ್, ಗುರುಕಿರಣ್ ದಂಪತಿ, ನಟ ಗುರುನಂದನ್ ಸೇರಿದಂತೆ ಹಲವರು ಆಗಮಿಸಿದ್ದರು.
ಏ.15ರಂದು ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಗ್ರಾಮದಲ್ಲಿ ಸೌಂದರ್ಯ ಜಗದೀಶ್ ಅಂತ್ಯಕ್ರಿಯೆ ನಡೆಸುವುದಾಗಿ ಕುಟುಂಬದವರು ತಿಳಿಸಿದರು.