ಶಿವಮೊಗ್ಗದಲ್ಲಿ : ಗೀತಾ ಶಿವರಾಜ್ ಕುಮಾರ್ ಅವರು ಕಾಂಗ್ರೆಸ್ ಪರ ಕಣಕ್ಕೆ ಇಳಿದಿದ್ದಾರೆ. ಅವರು ಇಂದು (ಏಪ್ರಿಲ್ 15) ಡಿಸಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ಸಂದರ್ಭದ ಫೋಟೋ ವೈರಲ್ ಆಗಿದೆ.
ಗೀತಾಗೆ ಪತಿ ಶಿವರಾಜ್ ಕುಮಾರ್, ಸಚಿವ ಮಧು ಬಂಗಾರಪ್ಪ, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಮಂಜುನಾಥ್ ಭಂಡಾರಿ ಸಾಥ್ ಸಾಥ್ ಕೊಟ್ಟಿದ್ದಾರೆ. ನಿರ್ಮಾಪಕರಾದ ಆರ್ ಚಂದ್ರು ಹಾಗೂ ಕೆಪಿ ಶ್ರೀಕಾಂತ್ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಶ್ರೀಕಾಂತ್ ಹಾಗೂ ಆರ್ ಚಂದ್ರು ಅವರು ಶಿವರಾಜ್ ಕುಮಾರ್ ಕುಟುಂಬದ ಜೊತೆ ಒಳ್ಳೆಯ ನಂಟು ಹೊಂದಿದ್ದಾರೆ. ಈ ಕಾರಣಕ್ಕೆ ಗೀತಾಗೆ ಅವರು ಬೆಂಬಲ ನೀಡಿದ್ದಾರೆ.
ಗೀತಾ ಶಿವರಾಜ್ ಕುಮಾರ್ ಅವರು ಮಾಜಿ ಸಿಎಂ, ಬಿಜೆಪಿ ಹಿರಿಯ ನಾಯಕ ಯಡಿಯೂರಪ್ಪ ಅವರ ಪುತ್ರ ಬಿ.ವೈ ರಾಘವೇಂದ್ರ ವಿರುದ್ಧ ಕಣಕ್ಕೆ ಇಳಿದಿದ್ದಾರೆ. ಪಕ್ಷೇತರವಾಗಿ ಈಶ್ವರಪ್ಪ ನಿಂತಿದ್ದಾರೆ. ಪ್ರತಿ ಊರಿಗೆ ತೆರಳಿ ಅವರು ಪ್ರಚಾರ ಮಾಡುತ್ತಿದ್ದಾರೆ. ಗೀತಾ ಪರ ಶಿವರಾಜ್ ಕುಮಾರ್ ವರು ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಈ ಮೊದಲು ಶಿವಮೊಗ್ಗದಿಂದ ಸ್ಪರ್ಧೆ ಮಾಡಿ ಅವರು ಸೋತಿದ್ದರು.
ಗೀತಾಗೆ ಪತಿ ಶಿವರಾಜ್ ಕುಮಾರ್, ಸಚಿವ ಮಧು ಬಂಗಾರಪ್ಪ, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಮಂಜುನಾಥ್ ಭಂಡಾರಿ ಸಾಥ್ ಸಾಥ್ ಕೊಟ್ಟಿದ್ದಾರೆ. ನಿರ್ಮಾಪಕರಾದ ಆರ್ ಚಂದ್ರು ಹಾಗೂ ಕೆಪಿ ಶ್ರೀಕಾಂತ್ ಆಲ್ ದಿ ಬೆಸ್ಟ್ ಹೇಳಿದ್ದಾರೆ.