ಚಿತ್ರದುರ್ಗ, ಏಪ್ರಿಲ್.15 : ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ. ಅಭ್ಯರ್ಥಿ ಗೋವಿಂದ ಕಾರಜೋಳರವರು ನಗರದ ಜೆ.ಸಿ.ಆರ್. ಮತ್ತು ವಿ.ಪಿ.ಬಡಾವಣೆಯಲ್ಲಿ ಸೋಮವಾರ ಮತಯಾಚಿಸಿದರು.
ಮನೆ ಮನೆಗೆ ತೆರಳಿ ಮತಯಾಚಿಸಿದ ಗೋವಿಂದ ಕಾರಜೋಳರವರು ನರೇಂದ್ರಮೋದಿ ಮೂರನೆ ಬಾರಿಗೆ ದೇಶದ ಪ್ರಧಾನಿಯಾಗಬೇಕಾಗಿರುವುದರಿಂದ ಈ ಬಾರಿಯ ಚುನಾವಣೆ ಅತ್ಯಂತ ಮಹತ್ವದ್ದಾಗಿದ್ದು, ಬಹಮತಗಳಿಂದ ಗೆಲ್ಲಿಸಿ ನನ್ನನ್ನು ಪಾರ್ಲಿಮೆಂಟ್‍ಗೆ ಕಳಿಸಿಕೊಡಿ ಎಂದು ಜನತೆಯಲ್ಲಿ ಮನವಿ ಮಾಡಿದರು.
ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ, ನಗರಾಧ್ಯಕ್ಷ ನವೀನ್ ಚಾಲುಕ್ಯ, ನಗರಸಭಾ ಸದಸ್ಯರಾದ ಸುರೇಶ್, ಹರೀಶ್, ಶ್ವೇತಾ ವೀರೇಶ್, ಜಿ.ಎನ್.ಮಲ್ಲಿಕಾರ್ಜುನ್, ಸಂತೋಷ್, ಹೆಗ್ಗನಗೌಡ, ಮುರುಗೇಶ್‍ಗೌಡ, ಸುರೇಶ್, ಬಾಬು, ಶೀಲ, ವೀಣ, ಮಂಜುಳಮ್ಮ, ಲೀಲಾ ಇನ್ನು ಅನೇಕರು ಮತಯಾಚನೆಯಲ್ಲಿ ಪಾಲ್ಗೊಂಡಿದ್ದರು.