ಚಿತ್ರದುರ್ಗ : ಸಂವಿಧಾನ ಮತ್ತು ಪ್ರಜಾಪ್ರಭುತ್ವ ಅಪಾಯದಲ್ಲಿದ್ದು ಅದನ್ನು ಉಳಿಸುವ ಉಪಾಯ ಹುಡುಕಬೇಕಾಗಿದೆ. ಈ ಯೋಜನೆಗಳು ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
ತಾಲೂಕಿನ ಸೀಬಾರದ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರ ಸಂವಿಧಾನ ಬಸಲಾಯಿಸಲು ಹೊರಟಿದ್ದಾರೆ.
ಸಂವಿಧಾನದ ಆಶಯಗಳಿಗೆ ದೊಡ್ಡಪೆಟ್ಟು ಕೊಟ್ಟಿದೆ. ಅದಾನಿ ಮತ್ತು ಅಂಬಾನಿಯವರಿಗೆ ಹೆಚ್ಚು ಮನ್ನಣೆ ನೀಡಿದ್ದು, ಅಸಹಾಯಕ ಜನರನ್ನು ತಳಪಾಯಕ್ಕೆ ತಳ್ಳುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಯಾವುದನ್ನು ಸಹ ಪ್ರಶ್ನೆ ಮಾಡಿದೆ. ಸರ್ವಾಧಿಕಾರಿ ಧೋರಣೆ ಉತ್ತುಂಗದಲ್ಲಿದೆ. ಇದಕ್ಕೆ ಕಡಿವಾಣ ಹಾಕುವ ಜವಾಬ್ದಾರಿ ತಮ್ಮ ಮತವನ್ನು ಮೇಲಿದೆ ಎಂದು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಒಂದು ಜಾತಿ, ಧರ್ಮಕ್ಕೆ ಸೀಮಿತರಾದವರಲ್ಲ. ದೇಶದ ಎಲ್ಲ ಜನರಿಗೆ ಸಮಾನ ನ್ಯಾಯ ಮತ್ತು ಹಕ್ಕನ್ನು ನೀಡಲು ಒತ್ತು ಕೊಟ್ಟಿದ್ದರು. ಪ್ರಮುಖವಾಗಿ ಮಹಿಳೆಯರಿಗಾಗಿ ಲೋಕಸಭೆಯಲ್ಲಿ ಹಿಂದು ಕೋಡ್ ಬಿಲ್ಲನ್ನು ಮಂಡಿಸಿದರು. ಅಂದು ಅಂದಿನ ಮನುವಾದಿಗಳನ್ನು ತಿರಸ್ಕರಿಸಿದರು. ಇದರಿಂದ ಮಹಿಳೆಯರಿಗಾಗಿ ನ್ಯಾಯ ಕೊಡಿಸಲು ಆಗಲಿಲ್ಲ ಎಂದು ಮನನೊಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಬಂದು ಹೋರಾಟ ನಡೆಸಿದರು.
ಸತಿ ಸಹಗಮನ ಪದ್ದತಿ, ಮಹಿಳೆಯರ ಶೋಷಣೆ, ಶಿಕ್ಷಣದಿಂದ ಹೆಣ್ಣನ್ನು ದೂರ ಇಡುವುದು ಮನುವಾದಿಗಳ ಗುರಿಯಾಗಿದೆ. ಎಲ್ಲಾವುಗಳ ವಿರುದ್ಧ ಹೋರಾಡಿದ ಅಂಬೇಡ್ಕರ್ ಅವರ ಆಶಯಗಳನ್ನು ಜನರು ಅರಿತುಕೊಳ್ಳಬೇಕು ಎಂದು ಹೇಳಿದರು.
ಅಸ್ಪೃಶ್ಯತೆ ಮತ್ತು ಅಸಮಾನತೆಯ ಆಂದೋಲನ ಆರಂಭ ಶೋಷಿತ ವರ್ಗಕ್ಕೆ ನ್ಯಾಯಒದಗಿಸಲು ಮಹಾನ್ ಹೋರಾಟ ನಡೆಸಿದ ದೇಶದ ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್. ಅವರು ದೇಶಕ್ಕೆ ಸಂವಿಧಾನವನ್ನು ನೀಡಿದ ಸಮಿತಿಯ ಅಧ್ಯಕ್ಷರಾಗಿ, ಸಮಾಜವನ್ನು ನಿರ್ವಹಿಸಿದ್ದಾರೆ, ಅರ್ಥ ನಿರ್ವಹಿಸಿದ್ದಾರೆ, ಇತಿಹಾಸಕಾರರಾಗಿ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಅವರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತರುವ ಎಲ್ಲರ ಜೊತೆಗೆ ಹಿಂದುಳಿದಿರುವ ಉದ್ದೇಶ ಅವರದಾಗಿತ್ತು.
ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಸದಸ್ಯರಾದ ಆರ್.ನರಸಿಂಹರಾಜು, ಚಿತ್ರದುರ್ಗ ಎಸ್.ಸಿ ವಿಭಾಗದ ಬ್ಲಾಕ್ ಅಧ್ಯಕ್ಷ ಅನಿಲ್ ಕೋಟಿ, ಎಲ್‌ಐಸಿ ಈರಣ್ಣಯ್ಯ, ಮುಖಂಡರಾದ ಜಾಲಿಕಟ್ಟೆ ತಿಪ್ಪೇಸ್ವಾಮಿ, ಬೋರನಹಳ್ಳಿ ಚೇತನ್, ತೇಕಲವಟ್ಟಿ ನಾಗರಾಜ್.