ಚಳ್ಳಕೆರೆ : ಕಾಂಗ್ರೆಸ್ ಸರ್ಕಾರದ ಪಂಚ ಯೋಜನೆಗಳಿಂದ ರಾಜ್ಯದ ಬಡ ಕುಟುಂಬಗಳಾದ ಕೂಲಿ ಕಾರ್ಮಿಕರು ಮಹಿಳೆಯರು ವೃದ್ಧರು ವಿಧವೆಯರು ಜನಸಾಮಾನ್ಯರು ಸೇರಿದಂತೆ ಎಲ್ಲ ಸಮುದಾಯಗಳಿಗೆ ಸಮಾನ ಪಂಚಭಾಗ್ಯಗಳನ್ನು ನೀಡಿ ನಿರಾಶ್ರಿತರ ಕಣ್ಣೀರು ಒರೆಸಿದ್ದೇವೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಇವರು ನಗರದ ಗುರು ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಕಾರ್ಯಕರ್ತರ ಸಭೆ ಹಾಗೂ ಡಾಕ್ಟರ್ ಬಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮಳೆ ಬೆಳೆ ಇಲ್ಲದೆ ಬರ ಆವರಿಸಿರುವ ರೈತರು, ಕೂಲಿ ಕಾರ್ಮಿಕರು, ಜನಸಾಮಾನ್ಯರು, ಹತಾಶರಾಗಿದ್ದಾರೆ.
ಈ ನಮ್ಮ ಕಾಂಗ್ರೆಸ್ ಸರ್ಕಾರದ ಪಂಚ ಭಾಗ್ಯಗಳಾದ ಹೆಣ್ಣು ಮಕ್ಕಳಿಗೆ ಬಸ್ ಫ್ರೀ, ಮಹಿಳೆಯರಿಗೆ 2000 ಮಾಸಿಕ ವೇತನ, ಹತ್ತು ಕೆಜಿ ಅಕ್ಕಿ, 3000 ವೇತನ, 200 ವ್ಯಾಟ್ ವಿದ್ಯುತ್ ಉಚಿತ, ಮಾಡಿ ಕುಟುಂಬಗಳಿಗೆ ಆಶ್ರಯವಾಗಿದೆ. ಇದು ಅಲ್ಲದೆ ಕೇಂದ್ರದಲ್ಲಿ ಕಾಂಗ್ರೆಸ್ ಹಾಗೂ ಘಟಬಂಧನ ಸರ್ಕಾರಕ್ಕೆ ಆಡಳಿತಕ್ಕೆ ಬಂದರೆ ಮಹಿಳೆಯರಿಗೆ 1 ಲಕ್ಷ ಉಚಿತ, ಜೊತೆಗೆ 25 ಜನಸಾಮಾನ್ಯರಿಗೆ ನೀಡುತ್ತೇವೆ,
ಈ ಬಡವರ ಪಕ್ಷವಾದ ಕಾಂಗ್ರೆಸ್ ಪಕ್ಷಕ್ಕೆ ನಮ್ಮ ಚಿತ್ರದುರ್ಗ ಲೋಕಸಭೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯಾದ ಚಂದ್ರಪ್ಪನವರನ್ನು ಅತಿಹೆಚ್ಚಿನ ಮತದಲ್ಲಿ ಜಯಶೀಲ ಘಟನೆ ಮಾಡಿ ಎಂದು ಹೇಳಿದರು. ಇನ್ನು ಈ ವೇಳೆ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಮಾತನಾಡಿ ನಮ್ಮ ಕಾಂಗ್ರೆಸ್ ಸರ್ಕಾರ ಬಡತನ ನಿರ್ಮೂಲನೆಯಾಗಿದೆ.
ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜನತೆಗೆ ಹೇಳಿದಂತೆ ನಡೆದುಕೊಂಡಿದ್ದಾರೆ ಬಿಜೆಪಿ ರವರು ಸುಳ್ಳು ಭರವಸೆಗಳನ್ನು ಕೊಟ್ಟು ಜನಸಾಮಾನ್ಯರಿಗೆ ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತಿ ರಾಷ್ಟ್ರ ಹಾಗೂ ರಾಜ್ಯದ ಜನತೆಯನ್ನು ದಿಕ್ಕು ತಪ್ಪಿಸಿದ್ದಾರೆ.
ಕೆಲವು ವರ್ಷಗಳಿಂದ ಭದ್ರಾ ಮಲ್ದೆ ಮೇಲ್ದಂಡೆ ಯೋಜನೆ ಸ್ಥಗಿತಗೊಂಡ ಕೇಂದ್ರ ಸರ್ಕಾರದೊಂದಿಗೆ ಮಾತನಾಡಿ ಬದ್ರಾ ಮೇಲ್ದಂಡೆ ಯೋಜನೆಗೆ ಹಣ ಕೊಡಿ ಎಂದು ಕೇಳಿದರೆ ನಮಗೆ ಹಣವಿಲ್ಲವೆಂದು ಹಾರಕ್ಕೆ ಉತ್ತರ ನೀಡಿದ್ದಾರೆ, ಈ ಒಂದು ವರ್ಷದ ಕರ್ನಾಟಕ ಕಾಂಗ್ರೆಸ್ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆ ಕೇವಲ ಆರು ತಿಂಗಳವರೆಗೆ ಪೂರ್ಣಗೊಳಿಸಿ ಚಿತ್ರದುರ್ಗ ಜಿಲ್ಲೆಯಲ್ಲಿ ಹಲವಾರು ಕೆರೆಗಳಿಗೆ ನೀರು ತುಂಬಿಸುವ ಕೆಲಸ ಕೇಂದ್ರ ಬಿಜೆಪಿ ಸುಳ್ಳು ಭರವಸೆಗಳನ್ನು ನಂಬದೇ ವಿಶ್ವಾಸವುಳ್ಳ ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ಪನವರಿಗೆ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಿಸಿಕೊಡಿ ಎಂದು ಹೇಳಿದರು.
ಇನ್ನು ಈ ಸಂದರ್ಭದಲ್ಲಿ ಚಿತ್ರದುರ್ಗ ಕ್ಷೇತ್ರದ ಎಂಎಲ್ ಎ ವೀರೇಂದ್ರ ಪಪ್ಪಿ, ಮೊಣಕಾಲ್ಮೂರು ಎಂಎಲ್ ಎ ಎಂ ವ್ಯ ಗೋಪಾಲಕೃಷ್ಣ, ಚಳ್ಳಕೆರೆ ಕ್ಷೇತ್ರದ ಎಂಎಲ್ ಎ ಟಿ ರಘುಮೂರ್ತಿ, ಎಚ್ ಆಂಜನೇಯ, ಲೋಕಸಭೆ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ, ಸಮಾರಂಭದಲ್ಲಿ ನಡೆದಿದೆ. ಈ ಸಂದರ್ಭದಲ್ಲಿ ಜಿ.ಎಸ್. ಮಂಜುನಾಥ್, ಅನ್ವರ್ ಪಾಷಾ, ಓ ಶಂಕರ್, ಕೃಷ್ಣಮೂರ್ತಿ, ಗೀತಾನಂದಿನಗೌ ಮಂಜುನಾಥಗೌಡ, ರೈತ ಸಂಘದ ಮುಖಂಡ ಸೋಮಗುದ್ದು ರಂಗಸ್ವಾಮಿ, ವಿಜಯ್ ಕುಮಾರ್, ನಾಗರಾಜ್, ಸೈಯದ್, ಸೇರಿದಂತೆ ಅನೇಕ ಕಾಂಗ್ರೆಸ್ ಭಾಗವಹಿಸಿದ್ದರು.