ನವದೆಹಲಿ : 2023ನೇ ಸಾಲಿನ (UPSC) ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ಒಟ್ಟು 1,016 ಅಭ್ಯರ್ಥಿಗಳು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತೀರ್ಣರಾಗಿದ್ದಾರೆ.
2023ನೇ UPSC ಪರೀಕ್ಷೆಯಲ್ಲಿ ಆದಿತ್ಯ ಶ್ರೀವಾಸ್ತವ್‌ಗೆ ದೇಶದಲ್ಲೇ ಮೊದಲ ಸ್ಥಾನ ಬಂದಿದೆ. ಅನಿಮೇಶ್ ಪ್ರದಾನ್‌ಗೆ ದ್ವಿತೀಯ ಹಾಗೂ ದೊನ್ನೂರು ಅನನ್ಯ ರೆಡ್ಡಿಗೆ 3ನೇ ಸ್ಥಾನ ಪಡೆದಿದ್ದಾರೆ. UPSC ಪರೀಕ್ಷೆಯಲ್ಲಿ ಕರ್ನಾಟಕದಿಂದ 25 ಮಂದಿ ಆಯ್ಕೆಯಾಗಿದ್ದಾರೆ.
10 ಟಾಪರ್‌ಗಳು ಇವರೇ!
1. ಆದಿತ್ಯ ಶ್ರೀವಾಸ್ತವ
2. ಅನಿಮೇಶ ಪ್ರಧಾನ್
3. ಡೋಣೂರು ಅಣ್ಣಾ ರೆಡ್ಡಿ
4. ಪಿ.ಕೆ ಸಿದ್ಧಾರ್ಥ್ ರಾಮ್‌ಕುಮಾರ್
5. ರುಹಾನಿ
6. ಸೃಷ್ಟಿ ದಾಬಾಸ್
7. ಅನ್ಮೋಲ್ ರಾಥೋರ್
8. ಆಶಿಶ್ ಕುಮಾರ್
9. ನೌಶೀನ್
10. ಐಶ್ವರ್ಯಂ ಪ್ರಜಾಪತಿ
ಆದಿತ್ಯ ಶ್ರೀವಾಸ್ತವ್ ಯಾರು? : ದೇಶದಲ್ಲಿ ನಂ.1 ಪಟ್ಟ ಅಲಂಕರಿಸಿರುವ ಆದಿತ್ಯ ಶ್ರೀವಾಸ್ತವ ಉತ್ತರ ಪ್ರದೇಶ ಲಕ್ನೋ ಮೂಲದವರು. IIT ಖಾನ್‌ಪುರದ ಪದವೀಧರರಾಗಿದ್ದಾರೆ. 12 ತರಗತಿಯಲ್ಲಿ ಶೇಕಡಾ. 95ರಷ್ಟು ಅಂಕ ಪಡೆದಿದ್ದ ಗೋಲ್ಡ್ ಮೆಡಲಿಸ್ಟ್ ಇದೀಗ UPSC ಪರೀಕ್ಷೆಯನ್ನು ಪಾಸ್ ಮಾಡಿದ್ದಾರೆ.
ಚಿಕ್ಕಂದಿನಿಂದಲೇ ಕಷ್ಟಪಟ್ಟು ಓದುತ್ತಿದ್ದ ಪ್ರತಿಭಾನ್ವಿತ ವಿದ್ಯಾರ್ಥಿ ಆದಿತ್ಯ ಶ್ರೀವಾಸ್ತವ್. ಇವರು UPSC ಪರೀಕ್ಷೆಯನ್ನು ಇದೇ ಮೊದಲ ಬಾರಿ ಬರೆದಿಲ್ಲ. 2022ರಲ್ಲೇ UPSC ಪರೀಕ್ಷೆ ಪಾಸು ಮಾಡಿದ್ದು 236ನೇ ಸ್ಥಾನ ಪಡೆದಿದ್ದರು.
2022 ರಲ್ಲಿ IPS ಪಾಸ್ ಮಾಡಿರುವ ಆದಿತ್ಯ ಶ್ರೀವಾಸ್ತವ್ ಅವರು ಸದ್ಯ ಅವರು ಹೈದರಾಬಾದ್‌ನ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. UPSC ರಿಸಲ್ಟ್ ಹೊರ ಬೀಳುತ್ತಿದ್ದಂತೆ ಹೈದರಾಬಾದ್‌ನ ಪೊಲೀಸ್ ಅಕಾಡೆಮಿಯಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಆದಿತ್ಯನ ಸ್ನೇಹಿತರು ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕುಣಿದು ಕುಪ್ಪಳಿಸಿದ್ದಾರೆ. ಆದಿತ್ಯ ಶ್ರೀವಾಸ್ತವ್ ಅವರನ್ನು ಎತ್ತಿ ಸಂಭ್ರಮ ಆಚರಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆದಿತ್ಯ ಶ್ರೀವಾಸ್ತವ್ ಜೊತೆ ಸಂಭ್ರಮಾಚರಣೆ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಬಹಳ ಕಷ್ಟಪಟ್ಟು UPSC ಪರೀಕ್ಷೆ ಪಾಸ್ ಮಾಡಿರುವ ಆದಿತ್ಯ ಶ್ರೀವಾಸ್ತವ್ ಅವರು ನನ್ನ ತಂದೆ ಅಜಯ್ ಶ್ರೀವಾಸ್ತವ ಹಾಗೂ ಕುಟುಂಬದ ಬೆಂಬಲದಿಂದ ಇದೆಲ್ಲಾ ಸಾಧ್ಯವಾಯಿತು. ಸಮಾಜದಲ್ಲಿರುವ ತಳಮಟ್ಟದವರಿಗೆ ಸೇವೆ ಸಲ್ಲಿಸಲು ನಾನು IAS ಆಗಲು ಬಯಸಿದ್ದೆ. ಇಡೀ ಸಮಾಜದ ವ್ಯವಸ್ಥೆಯನ್ನ ಬದಲಾವಣೆ ಮಾಡುವುದು ನನ್ನ ಗುರಿ ಎಂದು ಹೇಳಿದ್ದಾರೆ.