ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಗೋವಿಂದ ಕಾರಜೋಳ ಪರ ನಡೆದ ಲಿಂಗಾಯತ ಮುಖಂಡರ ಪ್ರಚಾರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಆಡಳಿತದ ವೇಳೆ 40% ಕಮಿಷನ್ ಹೊಡೆದಿದೆ. ಹೀಗಾಗಿ ಮತ ಕೇಳಲು ಬರುವ ಬಿಜೆಪಿ ನಾಯಕರಿಗೆ ಗೋ ಬ್ಯಾಕ್ ಹೇಳಿ ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿರುವ ವಿಚಾರಕ್ಕೆ ಬಿಎಸ್ವೈ ತಿರುಗೇಟು ನೀಡಿದರು.
ಚಿತ್ರದುರ್ಗದಲ್ಲಿ ಯಾರು ಗೋ ಬ್ಯಾಕ್, ಯಾರು ಕಮ್ ಬ್ಯಾಕ್ ಎಂಬುದು ಚುನಾವಣೆ ಬಳಿಕ ಗೊತ್ತಾಗಲಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಈಗ ನಾನು ಸಿದ್ಧರಾಮಯ್ಯಗೆ ಈ ಬಗ್ಗೆ ಉತ್ತರಿಸಲ್ಲ. ಈ ಲೋಕಸಭೆ ಚುನಾವಣೆ ಮುಗಿಯಲಿ. ಯಾರು ಗೋ ಬ್ಯಾಕ್, ಕಮ್ ಬ್ಯಾಕ್ ಎಂಬುದು ಗೊತ್ತಾಗಲಿದೆ ಎಂದು ಮಾರ್ಮಿಕವಾಗಿ ಟಾಂಗ್ ಕೊಟ್ಟರು.
ಕೊಪ್ಪಳದಲ್ಲಿ ಮುಂದುವರೆದಿರುವ ಸಂಸದ ಸಂಗಣ್ಣ ಕರಡಿ ಭಿನ್ನಮತದ ಬಗ್ಗೆ ಪ್ರತಿಕ್ರಿಯಿಸಿದ ಬಿಎಸ್ವೈ, ಎಲ್ಲವೂ ಬಗೆಹರಿದಿದೆ. ನಮ್ಮ ದೊಡ್ಡ ಪಕ್ಷದಲ್ಲಿ ಸಣ್ಣ ಭಿನ್ನಮತ ಸಹಜವಾಗಿರುತ್ತವೆ. ಕೆಲವೆಡೆ ಇರುವ ಭಿನ್ನಮತ ಸರಿಪಡಿಸುತ್ತೇವೆ ಎಂದರು. ಈ ವೇಳೆ ಮಾಜಿ ಸಚಿವ ಮುರುಗೇಶ್ ನೀರಾಣಿ, ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ, ಎಂಎಲ್ಸಿಗಳಾದ ರವಿಕುಮಾರ್, ನವೀನ್ ಇದ್ದರು.