ಬೆಂಗಳೂರು : ಕರ್ನಾಟಕ ಟೀಚರ್ಸ್ ಎಲಿಜಿಬಿಲಿಟಿ ಟೆಸ್ಟ್ – KARTET 2024 ದಿನಾಂಕ ನಿಗದಿಯಾಗಿದೆ. ಆಸಕ್ತರು ಅರ್ಜಿ ಸಲ್ಲಿಸಲು ಹಾಗೂ ಪರೀಕ್ಷೆ ಬರೆಯಲು ಸಕಲ ಸಿದ್ಧತೆ ನಡೆಸಿಕೊಳ್ಳಿ. ಪರೀಕ್ಷೆ ದಿನಾಂಕ ಇಲ್ಲಿದೆ ನೋಡಿ. ಶಾಲಾ ಶಿಕ್ಷಣ ಇಲಾಖೆಯು 2024ನೇ ಸಾಲಿನ KARTET -2024 ಪರೀಕ್ಷೆಯನ್ನು ದಿನಾಂಕ 30-06-2024 (ಭಾನುವಾರ) ರಂದು ನಡೆಸಲಿದೆ ಎಂದು ತಿಳಿದಿದೆ. ಈ ದಿನಾಂಕದಂದು ಎರಡು ಅಧಿವೇಶನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ.
KARTET -2024 ಅರ್ಜಿ ಸ್ವೀಕಾರ ಯಾವಾಗ ? : 2024ನೇ ಸಾಲಿನ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ಜೂನ್ ತಿಂಗಳಲ್ಲಿ ನಿಗದಿಪಡಿಸಿರುವ ಕಾರಣ ಏಪ್ರಿಲ್ ಅಂತ್ಯದೊಳಗೆ ಅರ್ಜಿ ಸ್ವೀಕಾರ ಮಾಡುವ ಸಾಧ್ಯತೆ ಇದೆ. ಈ ಕುರಿತು ಡೀಟೇಲ್ಡ್ ನೋಡಿಫಿಕೇಶನ್ ಅನ್ನು ಪ್ರಕಟಿಸಿ ಅರ್ಜಿ ಕರೆಯಲಾಗುತ್ತದೆ.
KTET 2024- ಶಿಕ್ಷಕರ ಅರ್ಹತಾ ಪರೀಕ್ಷೆ ಪತ್ರಿಕೆ ಕುರಿತು. ಪತ್ರಿಕೆ-1 : 1 ರಿಂದ 5ನೇ ತರಗತಿ ಬೋಧಿಸಲ್ಪಡುವ ಶಿಕ್ಷಕರಿಗಾಗಿ
ಪತ್ರಿಕೆ-2 : 6 ರಿಂದ 8ನೇ ತರಗತಿ ಬೋಧಿಸಲ್ಪಡುವ ಶಿಕ್ಷಕರಿಗಾಗಿ.
ಅಭ್ಯರ್ಥಿಗಳು ಈ ಮೇಲಿನ 2 ಹಂತದ ತರಗತಿಗಳಲ್ಲಿ ಬೋಧಿಸಲು ಅಪೇಕ್ಷಿಸಿದಲ್ಲಿ ಮೇಲಿನ 2 ಪರೀಕ್ಷೆಗಳಿಗೂ ಹಾಜರಾಗಿ ಪರೀಕ್ಷೆ ಬರೆಯಬೇಕಿರುತ್ತದೆ.
ಶಿಕ್ಷಕರ ಅರ್ಹತಾ ಪರೀಕ್ಷೆಯ ಪ್ರಶ್ನೆಪತ್ರಿಕೆ ಪ್ರತಿ ಪ್ರಶ್ನೆಗೆ ಒಂದು ಅಂಕದಂತೆ, ಒಟ್ಟು 150 ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ತಪ್ಪು ಉತ್ತರಗಳಿಗೆ ನೆಗೆಟಿವ್ ಮೌಲ್ಯಮಾಪನ ಇರುತ್ತದೆ. ಇತರೆ ಹೆಚ್ಚಿನ ಮಾಹಿತಿಗಳಿಗೆ ಶಾಲಾ ಶಿಕ್ಷಣ ಇಲಾಖೆ ಬಿಡುಗಡೆ ಮಾಡುವ ಸುದೀರ್ಘ ಅಧಿಸೂಚನೆಯನ್ನು ಓದಿಕೊಳ್ಳಬಹುದು. ಅಭ್ಯರ್ಥಿಗಳು ಭೇಟಿ ನೀಡಬೇಕಾದ ವೆಬ್ ವಿಳಾಸ www.schooleducation.kar.in.
ಶಿಕ್ಷಕರ ಅರ್ಹತಾ ಪರೀಕ್ಷೆ ತೆಗೆದುಕೊಳ್ಳಲು ಶುಲ್ಕ ವಿವರ
ಸಾಮಾನ್ಯ ಅಭ್ಯರ್ಥಿಗಳಿಗೆ ರೂ.700 (2 ಪತ್ರಿಕೆಗಳಿಗೆ ರೂ.1000).
ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ರೂ.700 (2 ಪತ್ರಿಕೆಗಳಿಗೆ ರೂ.1000).
SC / ST / ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ.350 (2 ಪತ್ರಿಕೆಗಳಿಗೆ ರೂ.500).
ಪ್ರಶ್ನೆ ಪತ್ರಿಕೆ ಯಾವ ಭಾಷೆಗಳಲ್ಲಿ ಇರಲಿದೆ?
ಭಾಷಾ ವಿಷಯಗಳ ಹೊರತುಪಡಿಸಿ, ಇತರೆ ಎಲ್ಲಾ ವಿಷಯಗಳ ಪ್ರಶ್ನೆಗಳನ್ನು ಕನ್ನಡ, ಇಂಗ್ಲಿಷ್, ಉರ್ದು, ತಮಿಳು, ತೆಲುಗು, ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ ನೀಡಲಾಗುತ್ತದೆ.
KARTET ಪರೀಕ್ಷಾ ಪಠ್ಯಕ್ರಮ ಡೌನ್‌ಲೋಡ್ ಹೇಗೆ? ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯ http://www.schooleducation.kar.nic.in ವೆಬ್‌ಗೆ ಭೇಟಿ ನೀಡಿ ಡೌನ್‌ಲೋಡ್ ಮಾಡಬಹುದು.
KARTET ಅರ್ಹತಾ ಅಂಕಗಳು ಎಷ್ಟು?
ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಕನಿಷ್ಠ ಶೇಕಡ.60 ಅರ್ಹತಾ ಅಂಕಗಳನ್ನು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ವಿಶೇಷ ಅಗತ್ಯವುಳ್ಳ ಅಭ್ಯರ್ಥಿಗಳು ಕನಿಷ್ಠ ಶೇ.55 ರಷ್ಟು ಅಂಕಗಳನ್ನು ಗಳಿಸಬೇಕು.
KARTET 2024 ಪರೀಕ್ಷೆ ಯಾವಾಗ?
KARTET 2024 ಪರೀಕ್ಷೆ ದಿನಾಂಕ : 30-06-2024 (ಭಾನುವಾರ)