ಬೆಂಗಳೂರು : ಬೈಕ್ನ ಹಿಂಭಾಗದಲ್ಲಿ ದಂಪತಿ ತಮ್ಮ ಮಗುವನ್ನು ನಿಲ್ಲಿಸಿಕೊಂಡು ವೇಗವಾಗಿ ಹೋಗುತ್ತಿರುವ ವಿಡಿಯೋ ಸೋಶಿಯಲ್ ಮೋಡಿಯಾದಲ್ಲಿ ವೈರಲ್ ಆಗುತ್ತಿದ್ದು ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಸಿಲಿಕಾನ್ ಸಿಟಿಯ ವೈಟ್ಫೀಲ್ಡ್ನ ಮುಖ್ಯರಸ್ತೆಯಲ್ಲಿ ದಂಪತಿ KA- 05, HW- 8193 ಬೈಕ್ನಲ್ಲಿ ತೆರಳುತ್ತಿರುತ್ತಾರೆ. ಆದರೆ ತಮ್ಮ ಮಗುವನ್ನು ಬೈಕ್ನ ಹಿಂಭಾಗದಲ್ಲಿ ಕಾಲಿಡಲು ಇರುವ ಫೂಟ್ ರೆಸ್ಟ್ ಮೇಲೆ ನಿಲ್ಲಿಸಿ ತಾಯಿ ಹಿಂದೆಯಿಂದ ಕೈ ಹಾಕಿ ಹಿಡಿದುಕೊಂಡಿದ್ದಾರೆ.
ಸ್ವಲ್ಪ ಯಾಮಾರಿ ಮಗು ಏನಾದರೂ ರಸ್ತೆ ಬಿದ್ದಿತು ಎಂದರೆ ಜೀವಕ್ಕ ಅಪಾಯ ಗ್ಯಾರಂಟಿ. ಇದೊಂದು ಅಸುರಕ್ಷಿತ ಚಾಲನೆ ಆಗಿದೆ. ತಿರುವಿನಲ್ಲೇ ಅದೇ ವೇಗದಲ್ಲಿ ಬೈಕ್ ಓಡಿಸಿದ್ದಾರೆ. ಈ ರೀತಿಯಲ್ಲಿ ದಂಪತಿ ತಮ್ಮ ಮಗುವನ್ನ ಬೈಕ್ನಲ್ಲಿ ಕರೆದುಕೊಂಡು ಹೋಗುತ್ತಿರುವುದು ನೋಡುಗರಿಗೂ ಆತಂಕ ಮೂಡಿಸುತ್ತದೆ.
ದಂಪತಿ, ಮಗು ಬೈಕ್ನಲ್ಲಿ ಹೋಗುತ್ತಿರುವ ದೃಶ್ಯವನ್ನ ಹಿಂಬದಿ ಬರುತ್ತಿದ್ದ ವಾಹನದಲ್ಲಿದ್ದವರು ಸೆರೆ ಹಿಡಿದಿದ್ದಾರೆ. ಸದ್ಯ ಬೈಕ್ ನಂಬರ್ ಬರೆದು, ವಿಡಿಯೋವನ್ನು ಪೋಸ್ಟ್ ಅನ್ನು ಎಕ್ಸ್ನಲ್ಲಿ ಶೇರ್ ಮಾಡಲಾಗಿದೆ. ಈ ದಂಪತಿ ವಿರುದ್ಧ ಪೊಲೀಸ್ ಇಲಾಖೆ ಏನಾದರೂ ಕ್ರಮ ತೆಗೆದುಕೊಳ್ಳಬಹುದೇ ಎಂದು ಪ್ರಶ್ನೆ ಮಾಡಿದ್ದಾರೆ. ನೆಟ್ಟಿಗರು ಕೂಡ ದಂಪತಿ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.